ಸೋಮವಾರಪೇಟೆ, ಡಿ. ೧೫: ಇಲ್ಲಿನ ಕೊಡವ ಸಮಾಜದ ವತಿಯಿಂದ ತಾ. ೨೬ ರಂದು ಸಮಾಜದ ಸಭಾಂಗಣದಲ್ಲಿ ಪುತ್ತರಿ ಊರೊರ್ಮೆ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಅರಣ್ಯಾಧಿಕಾರಿ ಅಜ್ಜಿಕುಟ್ಟಿರ ಸಿ. ಪೂವಯ್ಯ ಹಾಗೂ ಕಾಫಿ ಬೆಳೆಗಾರ ಕಾಂಡAಡ ಎಂ. ಬೋಪಣ್ಣ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ವಿಶೇಷ ಆಟೋಟ ಸ್ಪರ್ಧೆ ಮತ್ತು ಮಂಕ್ಯ ಗ್ರಾಮಸ್ಥರಿಂದ ಕೋಲಾಟ ಮತ್ತು ಬೊಳಕಾಟ್, ಆಟೋಟ ಸ್ಪರ್ಧೆ ನಡೆಯಲಿದೆ.

ಶೇ. ೬೫ಕ್ಕೂ ಹೆಚ್ಚಿನ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಿದ್ದು, ತಾ. ೨೪ ರ ಸಂಜೆ ೫ ಗಂಟೆಯೊಳಗೆ ಸಂಘದ ಕಚೇರಿಗೆ ಮಕ್ಕಳ ಅಂಕಪಟ್ಟಿ ಮತ್ತು ಇತರ ದಾಖಲಾತಿ ನೀಡುವಂತೆ ಅಭಿಮನ್ಯುಕುಮಾರ್ ತಿಳಿಸಿದ್ದಾರೆ.