ಮಡಿಕೇರಿ, ಡಿ. ೧೫: ಕೊಡಗು ಜಿಲ್ಲೆಯ ಸಾರ್ವಜನಿಕ ಹಾಗೂ ಸರಕಾರಿ ನಿರ್ಮಾಣ ಕಾಮಗಾರಿಗಳಿಗೆ ಬೇಡಿಕೆಗೆ ಅನುಸಾರವಾಗಿ ಮರಳು ಪೂರೈಕೆಯಾಗುತ್ತಿದ್ದು, ಮರಳಿನ ಕೊರತೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಪ್ರಶ್ನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಆಚಾರ್ ಹಾಲಪ್ಪ ಬಸಪ್ಪ ಉತ್ತರಿಸಿದರು.
ಮರಳು ಗಣಿಗಾರಿಕೆಗೆ ಸರಕಾರ ರೂಪಿಸಿರುವ ನಿಯಮಗಳ ಬಗ್ಗೆ ವೀಣಾ ಅಚ್ಚಯ್ಯ ಮಾಹಿತಿ ಕೋರಿದರು. ಅದಲ್ಲದೆ ಕೊಡಗಿಗೆ ಕಾಮಗಾರಿಗಳ ಬೇಡಿಕೆ ಅನುಗುಣವಾಗಿ ಮರಳು ಪೂರೈಕೆಯಾಗುತ್ತಿದೆಯೇ.? ಎಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ೨೦೨೧-೨೨ನೇ ಸಾಲಿಗೆ ಲೋಕೋಪಯೋಗಿ ಹಾಗೂ ಇತರೆ ಕಾಮಗಾರಿ ನಿರ್ವಹಿಸುವ ಇಲಾಖೆಗಳ ಮಾಹಿತಿಯಂತೆ ವಾರ್ಷಿಕವಾಗಿ ಕೊಡಗು ಜಿಲ್ಲೆಗೆ ಅಂದಾಜು ೧,೬೫,೦೦೦ ಮೆಟ್ರಿಕ್ ಟನ್ ಪ್ರಮಾಣದ ಮರಳಿನ ಅವಶ್ಯಕತೆ ಇದ್ದು, ಟೆಂಡರ್-ಕA-ಹರಾಜು ಮೂಲಕ ನದಿ ಪಾತ್ರದ ೧೭ ಮರಳು ಬ್ಲಾಕ್ಗಳಲ್ಲಿ ಮರಳು ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದೆ. ಈ ಬ್ಲಾಕ್ಗಳಿಂದ ವಾರ್ಷಿಕವಾಗಿ ೬೮,೬೫೦ ಮೆಟ್ರಿಕ್ ಟನ್ ಪ್ರಮಾಣದ ಮರಳನ್ನು ತೆಗೆಯಲು ರಾಜ್ಯ ಪರಿಸರ ಅಘಾತ ಅಂದಾಜೀಕರಣ ಪ್ರಾಧಿಕಾರದಿಂದ ವಾರ್ಷಿಕ ಮರಳು ಉತ್ಪಾದನೆಯನ್ನು ನಿಗದಿಪಡಿಸಲಾಗಿರುತ್ತದೆ. ಅಗತ್ಯ ಎಂ. ಸ್ಯಾಂಡ್ಗಳು ಲಭ್ಯವಿವೆ. ಇತರೆಡೆಗಳಿಂದಲೂ ಎಂ. ಸ್ಯಾಂಡ್ ಪೂರೈಕೆಯಾಗುತ್ತದೆ. ಹೊಸ ಮರಳು ನೀತಿಯಂತೆ ಒಟ್ಟು ೧೧ ಮರಳು ಬ್ಲಾಕ್ಗಳನ್ನು ಗುರುತಿಸಿದ್ದು, ಅಂದಾಜು ೩೧,೨೨೦ ಮೆಟ್ರಿಕ್ ಟನ್ ಪ್ರಮಾಣದಷ್ಟು ಮರಳನ್ನು ಸರಕಾರಿ ಕಾಮಗಾರಿಗಳಿಗೆ ಮೀಸಲಿರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.