ಮಡಿಕೇರಿ, ಡಿ. ೧೫: ಸಿ ಮತ್ತು ಡಿ ವರ್ಗೀಕೃತ ಜಮೀನನ್ನು ಅರಣ್ಯ

ಇಲಾಖೆಗೆ

ಹಸ್ತಾಂತರಿಸಲು ಉಚ್ಚ ನ್ಯಾಯಾಲಯ ಆದೇಶಿಸಿದ್ದು, ಇದು ಮರುಪರಿಶೀಲಿಸುವಂತೆ ಕೋರಿ ಸರಕಾರದಿಂದ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸ ಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾಹಿತಿ ನೀಡಿದರು.

(ಮೊದಲ ಪುಟದಿಂದ) ಈ ಬಗ್ಗೆ ವೀಣಾ ಅಚ್ಚಯ್ಯ ಪ್ರಶ್ನಿಸಿದ್ದು, ಈ ಬಗ್ಗೆ ಮಾಹಿತಿ ಬಯಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಕೊಡಗಿನಲ್ಲಿ ೧೧,೭೨೨.೨೯ ಹೆಕ್ಟೇರ್ ಸಿ ಮತ್ತು ಡಿ ವರ್ಗದ ಜಮೀನನ್ನು ಗುರುತಿಸಲಾಗಿದೆ. ಈ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವAತೆ ಇರುವ ಆದೇಶವನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕೆಂದು ಕೋರಲಾಗಿದೆ ಎಂದರು.

ಅಕಾಲಿಕ ಮಳೆಯಿಂದ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆ ವರದಿಯಾನುಸಾರ ೧,೩೦೬ ಹೆಕ್ಟೇರ್ ಭತ್ತ, ೩೮,೫೦೦ ಹೆಕ್ಟೇರ್‌ನಷ್ಟು ಕಾಫಿ ಬೆಳೆ ಹಾನಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ರೂ. ೬೧೧.೪೯ ಲಕ್ಷ ಇನ್‌ಪುಟ್ ಸಬ್ಸಿಡಿ ಅನುದಾನವನ್ನು ಬೆಳೆ ಹಾನಿಯಾದ ೭,೩೧೦ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.