ಮಡಿಕೇರಿ, ಡಿ. ೧೫: ನೂರು ವರ್ಷದ ಸಂಭ್ರಮದಲ್ಲಿರುವ
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವ ಭವನ ಉದ್ಘಾಟನೆ ಕಾರ್ಯಕ್ರಮ ತಾ. ೧೯ ರಂದು ನಡೆಯಲಿದೆ ಎಂದು ಸಮಿತಿ ತಿಳಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶತಮಾನೋತಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ನಗರದಲ್ಲಿ ಶಿಥಿಲವಾಗಿದ್ದ ಶ್ರೀ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪ ಹಳೆ ಕಟ್ಟಡವನ್ನು ಕೆಡವಿ ಹಲವು ದಾನಿಗಳ ಸಹಕಾರ ದಿಂದ ಇದೀಗ ಸುಸಜ್ಜಿತ ಭವನ ನಿರ್ಮಿಸಲಾಗಿದೆ. ೨೦೧೬ರಲ್ಲಿ ಈ ಬಗ್ಗೆ ್ಸವ ಯೋಜನೆ ರೂಪಿಸಲಾಗಿತ್ತು. ತಾಂತ್ರಿಕ ಕಾರಣ ಹಾಗೂ ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪ, ಕೊರೊನಾ ಪರಿಸ್ಥಿತಿಯಿಂದ ಭವನ ನಿರ್ಮಾಣ ಸ್ವಲ್ಪ ತಡವಾಯಿತು. ಮುಂದಿನ ದಿನಗಳಲ್ಲಿ ಸಸ್ಯಾಹಾರಿ ಕಾರ್ಯಕ್ರಮಗಳಿಗೆ ಭವನವನ್ನು ಬಾಡಿಗೆ ರೂಪದಲ್ಲಿ ನೀಡಲಾಗುವುದು. ೧,೫೦೦ ಮಂದಿ ಸೇರಬಹುದಾದ ಕಟ್ಟಡ ಇದಾಗಿದ್ದು, ಎಲ್ಲ ರೀತಿಯ ವ್ಯವಸ್ಥೆಗಳಿವೆ ಎಂದು ಮಾಹಿತಿ ನೀಡಿದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಎ.ಆರ್. ರಾಜಾರಾಮ ಮಾತನಾಡಿ, ತಾ. ೧೯ ರಂದು ಬೆಳಿಗ್ಗೆ ೭ ಗಂಟೆಯಿAದ ೯ ರವರೆಗೆ ಗಣಪತಿ ಪೂಜೆ, ರುದ್ರಪಠಣ, ಪೂರ್ವಕ ರುದ್ರಾಭಿಷೇಕ, ಸೂಕ್ತ ಪಠಣ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆ ಯಿಂದ ೧೦.೩೦ ಕವನ ವಾಚನ - ಕಥಾ ಪ್ರವಚನ, ೧೦.೩೦ ರಿಂದ ೧೧.೩೦ ಬ್ರಾಹ್ಮಣ ಸಾಧಕರ ಹವ್ಯಾಸ - ವೃತ್ತಿ ಪರಿಚಯ ಹಾಗೂ ಅನುಭವಗಳು, ೧೧.೩೦ ರಿಂದ ೧೨ ಹಿರಿಯ ನಾಗರಿಕರ ಜೀವನ ಮಾರ್ಗ ಮಂಥನ ಸಂವಾದ, ೧೨ ರಿಂದ ೧೨.೩೦ ಭಕ್ತಿಗಾನ ಸುಧಾ ನಡೆಯಲಿದೆ ಎಂದರು.
(ಮೊದಲ ಪುಟದಿಂದ) ಅಲ್ಲದೆ, ಬೆಳಿಗ್ಗೆ ೧೦ ಗಂಟೆಯಿAದ ಕವನಪೂರ್ವಕ ಐಕಮತ್ಯ ಹೋಮ ಮತ್ತು ಲೋಕಕಲ್ಯಾಣಾರ್ಥ ಧನ್ವಂತರಿಯಾಗ ನಡೆಯಲಿದೆ ಎಂದು ಮಾಹಿತಿಯಿತ್ತರು. ಇದರಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದು ಎಂದರು. ಮಧ್ಯಾಹ್ನ ೨ ರಿಂದ ೨.೪೫ ರವರೆಗೆ ಸಾಕ್ಷö್ಯಚಿತ್ರ ಪ್ರದರ್ಶನ ನಡೆಯಲಿದೆ. ೨.೪೫ ರಿಂದ ಸಭಾ ಕಾರ್ಯಕ್ರಮ ಜರುಗಲಿದೆ.
ಸಭಾ ಕಾರ್ಯಕ್ರಮವನ್ನು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್. ಸಚ್ಚಿದಾನಂದ ಮೂರ್ತಿ ಉದ್ಘಾಟಿಸಲಿದ್ದು, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಎ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ಕಿಮ್ಸ್ ಆಸ್ಪತ್ರೆಯ ಪ್ರೊ. ಗಿರಿಧರ್ ಉಪಾಧ್ಯಾಯ ದಿಕ್ಸೂಚಿ ಮಾರ್ಗದರ್ಶಕರಾಗಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬೈ ಮೂಲದ ದಾನಿ ದೇವಕಿ ಎಂ. ಜನಾರ್ದನ, ಅಮೇರಿಕಾದಲ್ಲಿ ನೆಲೆಸಿರುವ ದಾನಿ ಡಾ. ರಾಜಾಭಟ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ವಿದ್ವಾನ್ ಭಾನುಪ್ರಕಾಶ್ ಶರ್ಮ, ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿವಿಧ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಮಧ್ಯಾಹ್ನ ೨.೪೫ಕ್ಕೆ ಬಹುಮಾನ ವಿತರಿಸಲಾಗುವುದು. ಆರ್ಥಿಕ ಹಿಂದುಳಿದವರಿಗೆ ವಿಪ್ರ ಆರೋಗ್ಯ ಕವಚ ಕಾರ್ಡ್ ವಿತರಣೆ, ಉಚಿತ ಆರೋಗ್ಯ ತಪಾಸಣೆ, ದಾನಿಗಳ ಭಾವಚಿತ್ರದ ಫಲಕ ಅನಾವರಣ ಮಾಡಲಾಗುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಗೋಪಾಲಕೃಷ್ಣ, ಗೌರವ ಕಾರ್ಯದರ್ಶಿ ಬಿ.ಕೆ. ಅರುಣ್ ಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಸವಿತಾ ಭಟ್, ಮಮತಾ ಶಾಸ್ತಿç ಇದ್ದರು.