ಗೋಣಿಕೊಪ್ಪ ವರದಿ, ಡಿ. ೧೫: ಧನುಗಾಲ ಗ್ರಾಮದಲ್ಲಿ ಕಾಡಾನೆ ಹಿಂಡು ದಾಂಧಲೆ ನಡೆಸಿದ್ದು, ಸಾವಿರಾರು ಮೌಲ್ಯದ ಬೆಳೆ ನಷ್ಟವಾಗಿದೆ.

ಬೆಳೆಗಾರ ಟಿ.ಪಿ. ಜಗದೀಶ್ ಕಾಫಿ ತೋಟಕ್ಕೆ ಮಂಗಳವಾರ ರಾತ್ರಿ ನುಗ್ಗಿರುವ ಆನೆಗಳು ತೆಂಗು, ಅಡಿಕೆ, ಕಾಫಿ, ಬಾಳೆ ನಾಶ ಮಾಡಿವೆ. ಸುಮಾರು ೯ ತೆಂಗಿನ ಮರ, ೨೦೦ಕ್ಕೂ ಬಾಳೆ ಗಿಡ, ಅಡಿಕೆ ಮರ ಕಿತ್ತು ಹಾಕಿದೆ. ಕಾಫಿ ಮರದ ರೆಂಬೆ ಮುರಿದು ಫಸಲು ನಷ್ಟವಾಗಿದೆ. ಸುಮಾರು ೬ ಆನೆಗಳ ಹಿಂಡು ಗ್ರಾಮದಲ್ಲಿ ಸೇರಿಕೊಂಡು ನಷ್ಟ ಮಾಡುತ್ತಿದೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರ ನೀಡುವ ಭರವಸೆ ನೀಡಿದ್ದಾರೆ.