ಕೊಡಗು ಜಿಲ್ಲಾ ಪೊಲೀಸ್ ನಿಯಂತ್ರಣ ಕಚೇರಿಯ ಉಪ ನಿರೀಕ್ಷಕರಾಗಿದ್ದ ಚಿನ್ನಪ್ಪ ನಾಯಕ್ (೫೯) ತಾ. ೧೫ರಂದು ನಿಧನರಾದರು. ಮೂಲತಃ ಸುಳ್ಯ ತಾಲೂಕಿನ ಗುತ್ತಿಗಾರು ನಿವಾಸಿಯಾಗಿದ್ದ ಅವರು, ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಇದೀಗ ಜಿಲ್ಲಾ ನಿಯಂತ್ರಣ ಕಚೇರಿಯ ಉಪ ನಿರೀಕ್ಷಕರಾಗಿದ್ದರು, ಮುಂದಿನ ಡಿ. ೩೧ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.