ವೀರಾಜಪೇಟೆ, ಡಿ. ೧೫: ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘದ ಹಿಂದಿನ ಆಡಳಿತ ಮಂಡಳಿ ಕಟ್ಟಡ ನಿರ್ಮಾಣ ದಲ್ಲಿ ಮಾಡಿರುವ ದುರುಪಯೋಗ ದಿಂದ ಸಂಘದ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದ್ದು ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಕಷ್ಟವಾಗುತ್ತಿದೆ ಎಂದು ಅಧ್ಯಕ್ಷ ಕಂಜಿತAಡ ಮಂದಣ್ಣ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಮಹಾಸಭೆಯಲ್ಲಿ ಮಾತನಾಡಿ, ೮೦ ವರ್ಷ ಇತಿಹಾಸ ಹೊಂದಿರುವ ಸಂಘದಲ್ಲಿ ಕೇವಲ ೧೭ ಲಕ್ಷ ನಿವ್ವಳ ಲಾಭ ಇದೆ. ಕಟ್ಟಡ ನಿರ್ಮಾಣದಲ್ಲಿ ಹಣ ದುರುಪಯೋಗವಾಗಿದೆ. ನಕಾಶೆ ಹಾಗೂ ಯೋಜನಾ ವರದಿಯನ್ನು ತಾಂತ್ರಿಕ ತಜ್ಞರಿಂದ ಸಲಹೆ ಪಡೆಯದೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗುತ್ತಿಗೆದಾರರಿಗೆ ನೀಡಿದ ಹಣವನ್ನು ಎಂ.ಬಿ. ಪುಸ್ತಕದಲ್ಲಿ ನಮೂದಿಸಿಲ್ಲ. ವೈಜ್ಞಾನಿಕ ರೀತಿಯಲ್ಲಿ ಕಟ್ಟಡ ನಿರ್ಮಾಣ ಆಗಿಲ್ಲ ಎಂದು ಕಳೆದ ಮಹಾಸಭೆಯಲ್ಲಿಯೆ ಪ್ರಸ್ತಾಪ ಮಾಡಲಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ? ಎಂದು ಸದಸ್ಯರು ಗಳಾದ ಮಚ್ಚಾರಂಡ ತಿಮ್ಮಯ್ಯ, ಕೋಲತಂಡ ಬೋಪಯ್ಯ, ಮಾದಂಡ ಪೂವಯ್ಯ, ಕೆ.ಎಂ. ಚರ್ಮಣ, ಚೇಂದ್ರಿಮಾಡ ಗಣೇಶ್ ನಂಜಪ್ಪ, ಕುಂಬೆರ ಮನುಕುಮಾರ್ ಸೇರಿದಂತೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಒಂದು ಸಮಿತಿಯನ್ನು ರಚಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.
ಸದಸ್ಯರುಗಳ ಅಹವಾಲುಗಳಿಗೆ ಉತ್ತರಿಸಿದ ಅಧ್ಯಕ್ಷರು, ಹಿಂದಿನ ಸಾಲಿನ ಆಡಳಿತ ಮಂಡಳಿ ಕಟ್ಟಡ ನಿರ್ಮಾಣಕ್ಕೆ ರೂ. ೪ ಕೋಟಿಗೂ ಅಧಿಕ ವ್ಯಯ ಮಾಡಿದೆ. ನಿಯಮಾನು ಸಾರವಾಗಿ ಯೋಜನಾ ವರದಿ ತಯಾರಿಸಿಲ್ಲ. ನಿಯಮಾನು ಸಾರ ಮತ್ತು ತಾಂತ್ರಿಕ ತಜ್ಞರ ಸಲಹೆ ಪಡೆಯದ ಕಾರಣ ಕಟ್ಟಡ ಸಂಪೂರ್ಣ ಕಳಪೆಯಾಗಿದೆ. ನಿರ್ದಿಷ್ಟ ಹಣಕ್ಕಿಂತ ಹೆಚ್ಚುವರಿ ಹಣ ಹಾಗೂ ಇಲಾಖಾ ಅನುಮತಿ ಪಡೆಯದ ಕಾರಣ ತನಿಖೆ ನಡೆಸು ವಂತೆ ಜಿಲ್ಲಾ ಸಹಕಾರ ನಿದೆೆÃðಶಕರಿಗೆ ದೂರು ನೀಡಲಾಗಿದೆ. ಕೋವಿಡ್ ಇರುವ ಕಾರಣ ಸ್ಪಲ್ಪ ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು.
ಉಳಿದಂತೆ ಸಂಘದ ಮೂಲ ಉದ್ದೇಶದಂತೆ ಜೇನು ಕೃಷಿ ಉತ್ಪಾದಿಸಲು ೧೦ ಕಿ.ಮೀ ವ್ಯಾಪ್ತಿಯಲ್ಲಿ ೨ ಎಕರೆ ಜಾಗವನ್ನು ಖರೀದಿಸಿ ಹನಿಪಾರ್ಕ್ (ಮಧುವನ) ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಖಾದಿ ಮಂಡಳಿ, ಸ್ಥಳೀಯ ಬ್ಯಾಂಕ್, ಇತರೆ ಆರ್ಥಿಕ ನೆರವು ನೀಡುವ ಸಂಸ್ಥೆಗಳೊAದಿಗೆ ವ್ಯವಹರಿಸಲಾಗುತ್ತಿದೆ.
ಈ ಯೋಜನೆ ಅನುಷ್ಠಾನದಲ್ಲಿ ಸದಸ್ಯರಿಗೆ ತರಬೇತಿ ಹಾಗೂ ಜೇನು ಕುಡಿಗಳನ್ನು ನೇರವಾಗಿ ಸಂಘದಿAದ ನೀಡಲು ಸಹಕಾರಿಯಾ ಗುತ್ತದೆ. ಕಾಫಿ ಸೊಸೈಟಿಯ ಮೂಲಕ ವ್ಯವಹಾರ ನಡೆಸಿ ಕಾಫಿ ಪುಡಿ ಮಾಡಿ ಮಾರಾಟ ಮಾಡುವ ಯೋಜನೆ ಯನ್ನು ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಚೇನಂಡ ಸುರೇಶ್ ನಾಣಯ್ಯ, ನಿರ್ದೇಶಕರು ಗಳಾದ ಕೋಡಿರ ಚಂಗಪ್ಪ, ಚೆರಿಯಪಂಡ ರಾಜ ನಂಜಪ್ಪ, ಕಾದಿರ ಪಳಂಗಪ್ಪ, ಬಿ.ಎಂ ದೇವಯ್ಯ, ಮೊಳ್ಳೆರ ಪೂಣಚ್ಚ, ಕಾಟುಮಣಿಯಂಡ ಉಮೇಶ್, ಕೊಲ್ಲಿರ ಚಿಣ್ಣಪ್ಪ, ಬಾಚಮಂಡ ಸುಬ್ರಮಣಿ, ಕುಡಿಯರ ತಿಮ್ಮಯ್ಯ, ಕೆ.ಬಿ ವಿಜಯನ್, ಹೆಚ್.ಪಿ ಉದಯ, ಅಮ್ಮೆಕಂಡ ದಮಯಂತಿ, ಅಪ್ಪಚ್ಚಿರ ನೀಲಮ್ಮ, ಹೆಚ್,ಆರ್ ರಾಮಕೃಷ್ಣ ಕುಯ್ಯಮುಡಿ ತೀರ್ಥಕುಮಾರ್, ಉಪಸ್ಥಿತರಿದ್ದರು.