ಮಡಿಕೇರಿ, ಡಿ. ೧೩: ನವೀಕೃತ ಕಾಶಿ ವಿಶ್ವನಾಥ ಧಾಮವನ್ನು ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು. ಹೋಮ ಹವನ ಪೂಜಾದಿಗಳೊಂದಿಗೆ ಉದ್ಘಾಟನೆ ನೆರವೇರಿತು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಡಗಿನ ವಿವಿಧೆಡೆ ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.
ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ಪೊನ್ನಂಪೇಟೆ, ಮರಗೋಡು, ಪೆರಾಜೆ, ನಾಪೋಕ್ಲು ಮತ್ತಿತರೆಡೆಗಳಲ್ಲಿ ಪೂಜೆ ನಡೆಯಿತು. ಮಡಿಕೇರಿಯಲ್ಲಿ ಶ್ರೀ ಓಂಕಾರೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ಓಂಕಾರ ಸದನದಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ನಗರಾಧ್ಯಕ್ಷ ಮನು ಮಂಜುನಾಥ್, ಕಾರ್ಯಕ್ರಮದ ರಾಜ್ಯ ಸಹ ಸಂಚಾಲಕ ಡಾ. ಬಿ.ಸಿ. ನವೀನ್ ಕುಮಾರ್, ಜಿಲ್ಲಾ ಸಂಚಾಲಕ ಮಹೇಶ್ ಜೈನಿ, ನಗರ ಸಂಚಾಲಕ ಉಮೇಶ್ ಸುಬ್ರಮಣಿ, ಸಹ ಸಂಚಾಲಕಿ ಅನಿತಾ ಪೂವಯ್ಯ ಮತ್ತಿತರರಿದ್ದರು. ಸಿ.ಎನ್. ಸೋಮೇಶ್ ಕಾರ್ಯಕ್ರಮದ ಕುರಿತು ಮಾತನಾಡಿದರು.
ಪೊನ್ನಂಪೇಟೆಯಲ್ಲಿ ಪೂಜೆ
*ಗೋಣಿಕೊಪ್ಪ: ದಿವ್ಯಕಾಶಿ, ಭವ್ಯಕಾಶಿ ಕಾರ್ಯಕ್ರಮದ ಅಂಗವಾಗಿ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದ ಗಣಪತಿ ಮೂರ್ತಿಯ ಎದುರು ತಾಲೂಕು ಬಿಜೆಪಿ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಲಿದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಾಜೀ ಮಹರಾಜ್ ಅವರ ಸಾನಿಧ್ಯದಲ್ಲಿ ತಾಲೂಕು ಬಿಜೆಪಿಯ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರಾರ್ಥಿಸಿದರು.
ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ಪ್ರಧಾನ ಕಾರ್ಯದರ್ಶಿ, ಕಾರ್ಯಕ್ರಮದ ತಾಲೂಕು ಸಂಚಾಲಕ ಅಜ್ಜಿಕುಟ್ಟಿರ ಪ್ರವೀಣ್ ಮುತ್ತಪ್ಪ, ಸಹ ಸಂಚಾಲಕ ಚೋಡುಮಾಡ ದಿನೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ ಹಾಗೂ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರುಗಳು ಹಾಜರಿದ್ದರು.