ಕಣಿವೆ, ಡಿ. ೧೩: ಇಲ್ಲಿಗೆ ಸಮೀಪದ ಚಿಕ್ಕ ಅಳುವಾರದ ರೈತ ತಮ್ಮಣ್ಣಶೆಟ್ಟಿ ಎಂಬವರಿಗೆ ಸೇರಿದ ಹೆಂಚಿನ ಮನೆಯ ಮೇಲೆ ಬೂದಿಕುಂಬಳದ ಬಳ್ಳಿಯೊಂದು ಬೆಳೆದು ೨೫ ಕ್ಕೂ ಅಧಿಕ ಕಾಯಿಗಳನ್ನು ಬಿಟ್ಟಿದೆ.
ಕಾಡಾನೆ ಹಾವಳಿ ಹೆಚ್ಚಾಗಿರುವ ಕಾಡಂಚಿನ ಈ ಕೃಷಿಕ ತನ್ನ ಜಮೀನಿನಲ್ಲಿ ಅಥವಾ ಮನೆಯಂಗಳದಲ್ಲಿ ಇದೇ ಬಳ್ಳಿ ಈ ಪ್ರಮಾಣದ ಕಾಯಿ ಬಿಟ್ಟಿದ್ದರೆ ಅವು ಕಾಡಾನೆಗಳ ಪಾಲಾಗುತ್ತಿದ್ದವು. ಆದರೆ ಮನೆಯ ಸೂರಿನ ಮೇಲೆ ಸೊಂಪಾಗಿ ಬೆಳೆದಿರುವುದರಿಂದ ಈ ಕಾಯಿಗಳಿಗೆ ಯಾವುದೇ ಹಾನಿ ಇಲ್ಲ. ಹಾಗಾಗಿ ಫಸಲು ಕೊಯ್ಲಿಗೆ ಬಂದಿದ್ದರೂ ಕೂಡ ಮನೆಯ ಮೇಲೆ ಸುರಕ್ಷಿತವಾಗಿ ಬಳ್ಳಿಯಲ್ಲಿರುವುದರಿಂದ ಯಾವುದೇ ಚಿಂತೆಯಿಲ್ಲ ಎನ್ನುತ್ತಾರೆ ಕೃಷಿಕ ಶೆಟ್ಟಿ. - ಮೂರ್ತಿ