ಹೆಬ್ಬಾಲೆ ಡಿ.೧೩ : ಸಮೀಪದ ತೊರೆನೂರು ನೀರು ಬಳಕೆದಾರರ ಸಂಘದ ಆಡಳಿತ ಮಂಡಳಿಗೆ ತಾ.೨೭ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆ ವರೆಗೆ ಚುನಾವಣೆ ನಡೆಯಲಿದೆ.

ಸಂಘದ ಅರ್ಹ ಸದಸ್ಯರು ತಾ.೧೭ ರಿಂದ ೧೯ ರಂದು ಮಧ್ಯಾಹ್ನ ೩ ಗಂಟೆ ಒಳಗೆ ನಾಮಪತ್ರವನ್ನು ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸಬಹುದು.

ತಾ.೨೦ ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ತಾ.೨೧ ರಂದು ಸಂಜೆ ೪ ಗಂಟೆ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಇರುತ್ತದೆ. ನಾಮಪತ್ರ ಹಿಂಪಡೆಯುವ ಕಾರ್ಯ ಮುಗಿದ ನಂತರ ಚುನಾವಣೆ ಅವಶ್ಯಕತೆ ಇದ್ದಲ್ಲಿ ತಾ.೨೭ ರಂದು ಚುನಾವಣೆ ನಡೆಯಲಿದೆ.ಚುನಾವಣೆ ಮುಗಿದ ನಂತರ ಮತ ಏಣಿಕೆ ಕಾರ್ಯ ನಡೆದು ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಚುನಾವಣಾ ಅಧಿಕಾರಿ ಎಚ್.ಎಂ.ರಘು ತಿಳಿಸಿದ್ದಾರೆ.