ಹೆಬ್ಬಾಲೆ ಡಿ.೧೩ : ಸಮೀಪದ ಶಿರಂಗಾಲ ನೀರು ಬಳಕೆದಾರರ ಸಂಘದ ೨೦೨೧-೨೪-೨೫ನೇ ಸಾಲಿನ ಆಡಳಿತ ಮಂಡಳಿಗೆ ೧೧ ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಎಸ್.ಪಿ.ಚೇತನ್, ಎಸ್.ಎ.ಶ್ರೀನಿವಾಸ್, ಎಂ.ಟಿ.ಕೃಷ್ಣಪ್ಪ, ಎಸ್.ಬಿ.ಶ್ರೀಕಾಂತ್, ಎಸ್.ವಿ. ವಿಶ್ವನಾಥ್,ಮಾರಪ್ಪ, ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಎನ್.ಸಿ. ಶ್ರೀಧರ್, ಎಸ್.ಸಿ. ಪ್ರಕಾಶ್, ಸಾಮಾನ್ಯ ಮಹಿಳಾ ಕ್ಷೇತ್ರ ರಿಂದ ಎಸ್.ಕೆ. ಪಾರ್ವತಮ್ಮ, ಎಸ್.ಡಿ. ಪ್ರೇಮಾ ಹಾಗೂ ಮೀಸಲು ಕ್ಷೇತ್ರದಿಂದ ಬಿ.ಸಿ.ಬೇಲಯ್ಯ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮೋಹನ್ ತಿಳಿಸಿದ್ದಾರೆ.