ಸುಂಟಿಕೊಪ್ಪ, ಡಿ. ೧೨: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರಂಡಿಗಳಲ್ಲಿ ಕುರುಚಲು ಗಿಡ ಬೆಳೆದು ನಿಂತು ನೀರು ಸರಾಗವಾಗಿ ಹರಿಯದೆ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಸ್ವಚ್ಛತೆಗಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಲಕ್ಷಾಂತರ ಹಣ ವನ್ನು ಮೀಸಲಿ ರಿಸಲಾಗಿದೆ. ಗ್ರಾಮ ಮಟ್ಟದಿಂದಲ್ಲೆ ಸ್ವಚ್ಛತೆಯನ್ನು ಕಂಡುಕೊಳ್ಳುವAತೆ ರಾಜ್ಯ ಸರಕಾರ, ಜಿಲ್ಲಾಡಳಿತದ ಮೂಲಕ ಜನಜಾಗೃತಿ ಕಾರ್ಯಕ್ರಮಗಳನ್ನು ಲಕ್ಷಾಂತರ ರೂಪಾಯಿ ವ್ಯಯಿಸಿ ಆಯೋಜಿಸಲಾಗುತ್ತಿದೆ.
ಸುಂಟಿಕೊಪ್ಪ ಪಟ್ಟಣದ ನಡುವೆ ರಾಷ್ಟಿçÃಯ ಹೆದ್ದಾರಿಯು ಹಾದು ಹೋಗಿದೆ ಹೆದ್ದಾರಿ ಬದಿಯಲ್ಲಿ ಚರಂಡಿಯನ್ನು ನಿರ್ಮಿಸಲಾಗಿದೆ. ಇತ್ತೀಚಿನ ದಿನಗಳಿಂದ ಚರಂಡಿಯಲ್ಲಿ ಗಿಡ ಗಂಟಿ ಬೆಳೆದ ಪರಿಣಾಮ ಕಲುಷಿತ ನೀರು ಸರಾಗವಾಗಿ ಸಾಗದೆ ಅಲ್ಲೇ ಕಟ್ಟಿ ನಿಂತು ದುರ್ವಾಸನೆ ಬರುತ್ತಿದೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರ ಕೊರತೆಯಿದ್ದು, ದಿನಗೂಲಿಯಾಗಿ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲು ಏಕೆ ಮುಂದಾಗುತ್ತಿಲ್ಲ. ಸುಂಟಿಕೊಪ್ಪ ಪಂಚಾಯಿತಿ ಆಡಳಿತ ಮಂಡಳಿಯವರು ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.