ಮಡಿಕೇರಿ, ಡಿ. ೧೨: ತಾ. ೧೫, ೧೬, ಮತ್ತು ೧೭ ರಂದು ಕಾಕೋಟುಪರಂಬುನಲ್ಲಿ ನೆಲೆ ನಿಂತಿರುವ ಶ್ರೀ ಕಾಲಭೈರವ ಕಾಕೋಟಿಶ್ವರ ದೇವರ ಹಬ್ಬವು ನಡೆಯಲಿದೆ. ತಾ. ೧೫ ರಂದು ಮಧ್ಯಾಹ್ನ ೩ ಗಂಟೆಗೆ ಕಾರಿಕೊಟ್ಟ ಕಾರ್ಯಪ್ಪ ಕೋಲ ಮತ್ತು ‘ಮಂದಕನ ಪಾಟ್’ ನಡೆಯಲಿದೆ. ತಾ. ೧೬ ರಂದು ಮಧ್ಯಾಹ್ನ ೨ ಗಂಟೆಗೆ ದೇವರ ದೊಡ್ಡ ಹಬ್ಬ ಮತ್ತು ಚಾಮುಂಡಿ ದೇವಿಯ ಕೋಲ ನಡೆಯಲಿದೆ. ತಾ. ೧೭ ರಂದು ಮಧ್ಯಾಹ್ನ ೪ ಗಂಟೆಗೆ ದೇವರು ಜಳಕಕ್ಕೆ ಹೋಗುವುದು. ನಂತರ ಅಕ್ಕವ್ವ ದೇವಿ ತಾಯಿಯ ಪೀಲಿ ಆಟ್ ನಡೆಯಲಿದೆ. ಎಂದು ಪ್ರಕಟಣೆ ತಿಳಿಸಿದೆ.