ವೀರಾಜಪೇಟೆ, ಡಿ. ೧೨: ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಓಣಂ ಆಚರಣಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಇ.ಸಿ. ಜೀವನ್ ಅವರಿಗೆ ಓಣಂ ಆಚರಣಾ ಸಮಿತಿಯಿಂದ ಶ್ರದ್ಧಾಂಜಲಿ ಸಭೆ ಏರ್ಪಡಿಸಿತ್ತು.
ವೀರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಮತ್ತು ಅಂಗ ಸಂಸ್ಥೆಯಾದ ಓಣಂ ಆಚರಣಾ ಸಮಿತಿ ವತಿಯಿಂದ ದೇವಾಲಯದ ಮುತ್ತಪ್ಪ ಕಲಾ ಮಂಟಪ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಸಮಿತಿಯ ಉಪಾಧ್ಯಕ್ಷ ಟಿ.ಕೆ. ಪದ್ಮನಾಭ ಮಾತನಾಡಿದರು. ಬಿಪಿನ್ ರಾವತ್ ಮತ್ತು ಅವರ ಪತ್ನಿ ಹಾಗೂ ಇತರ ಸೇನಾಧಿಕಾರಿಗಳಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.
ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಅಧ್ಯಕ್ಷ ನಾರಾಯಣ, ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಸದಸ್ಯ ಸಿ.ಆರ್. ಸಜೀವನ್, ಓಣಂ ಸಮಿತಿಯ ಕಾರ್ಯದರ್ಶಿ ಸಿ.ಆರ್. ಬಾಬು ಮತ್ತು ಸಹ ಕಾರ್ಯದÀರ್ಶಿ ಎಂ.ಎಸ್. ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.