ಕಿಶೋರ್ ಶೆಟ್ಟಿ

ವೀರಾಜಪೇಟೆ, ಡಿ. ೧೧: ಕೊಡಗು-ಕೇರಳ ಗಡಿಯಾದ ಮಾಕುಟ್ಟ ಚೆಕ್‌ಪೋಸ್ಟ್ ಮೂಲಕ ಭಾರೀ ಪ್ರಮಾಣದ ಗಾಂಜಾವನ್ನು ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದ ಮೂವರನ್ನು ಬಂಧಿಸಲಾಗಿದ್ದು, ಅಂದಾಜು ಎರಡು ಕೋಟಿ ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಅಂತರ ರಾಜ್ಯ ರಹದಾರಿಯನ್ನು ಪಡೆದಿರುವ ಲಾರಿಯಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣ ಮೂಲಕ ಕೇರಳ ರಾಜ್ಯಕ್ಕೆ ಅಕ್ರಮವಾಗಿ ೨೨೭ ಕೆ.ಜಿ ಗಾಂಜಾ ತುಂಬಿ ವಿವಿಧ ರಾಜ್ಯಗಳ ಗಡಿಯನ್ನು ದಾಟಿ ಇರಿಟ್ಟಿ ಕೂಟುಪೊಳೆ ವಳವುಪಾರ ಎಂಬಲ್ಲಿ ಬರುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ಕೇರಳ ರಾಜ್ಯದ ಮಟ್ಟನ್ನೂರು ಪುತ್ತನ್‌ಪುರ ಹೌಸ್ ನಿವಾಸಿಯಾದ ಅಬ್ದುಲ್ ಮಜೀದ್ (೪೪), ತಲಚೇರಿ ನಿವಾಸಿ ಸಜೀರ್ (೩೮) ಮತ್ತು ವಲಿಯಾಂಬ್ರ ಪಯಶಿ ಡ್ಯಾಂ ಬಳಿಯ ಶಕೀಲಾ ಮಂಜಿಲ್ ನಿವಾಸಿ ಎಂ ಶಂಸೀರ್ (೨೩) ಬಂಧಿತ ಆರೋಪಿಗಳು.

ವಿಶಾಖಪಟ್ಟಣದಿಂದ ಸಾಗಾಟ

ಕೇರಳ ರಾಜ್ಯದ ನೋಂದಾಣಿ ಯಾಗಿರುವ

(ಮೊದಲ ಪುಟದಿಂದ) ಲಾರಿಯಲ್ಲಿ (ಕೆಎಲ್-೫೮ಎಬಿ-೪೪೮೧) ಇಬ್ಬರು ಆರೋಪಿತರು ಮತ್ತು ಪಿಕ್‌ಅಪ್ (ಕೆಎಲ್-೧೪ಎಫ್-೩೫೨೪) ವಾಹನದಲ್ಲಿ ಹಾಗೂ ಒಬ್ಬ ಕೇರಳದಿಂದ ಕರ್ನಾಟಕ ರಾಜ್ಯ ಗಡಿಭಾಗವಾದ ಮಾಕುಟ್ಟ ಮಾರ್ಗವಾಗಿ ಬೆಂಗಳೂರು ನಗರವನ್ನು ಪ್ರವೇಶಿಸಿ ಪಿಕಪ್ ವಾಹನವನ್ನು ಬೆಂಗಳೂರು ನಗರದ ಅಜ್ಞಾತ ಸ್ಥಳದಲ್ಲಿ ನಿಲುಗಡೆಗೊಳಿಸಿ. ಲಾರಿಯೊಂದಿಗೆ ಮೂವರು ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಪ್ರಯಾಣ ಬೆಳೆಸಿದ್ದಾರೆ.

ನಂತರ ವಿಶಾಖಪಟ್ಟಣಂ ಸನಿಹದ ಅಜ್ಞಾತ ಸ್ಥಳದಿಂದ ೨೨೭ ಕೆ.ಜಿ. ಗಾಂಜಾ ಪೊಟ್ಟಣಗಳನ್ನು ಲಾರಿಯಲ್ಲಿ ತುಂಬಿಸಿಕೊAಡು ಬೆಂಗಳೂರಿಗೆ ಆಗಮಿಸಿದ ತಂಡ ಯಾರಿಗೂ ಸಂದೇಹ ಬಾರದ ರೀತಿಯಲ್ಲಿ ಲಾರಿಯಲ್ಲಿ ಗ್ರಾನೈಟ್‌ಗಳು, ತಂಪು ಪಾನೀಯ ಬಾಟೆಲ್‌ಗಳು ಹಾಗೂ ಇನ್ನಿತರ ಗೃಹ ಉಪಯೋಗಿ ದಿನಸಿ ವಸ್ತುಗಳನ್ನು ಗಾಂಜಾ ಪೊಟ್ಟಣಗಳ ಮೇಲ್ಭಾಗದಲ್ಲಿರಿಸಿ ಲಾರಿಯನ್ನು ಇಬ್ಬರು ಆರೋಪಿಗಳು ಬೆಂಗಳೂರಿನಿAದ ವಿವಿಧ ರಾಜ್ಯಗಳ ಚೆಕ್‌ಪೋಸ್ಟ್ ದಾಟಿ ಕೊಡಗು-ಕೇರಳ ಗಡಿಭಾಗವಾದ ಮಾಕುಟ್ಟ ಚೆಕ್‌ಪೋಸ್ಟ್ ದಾಟಿ ಕೇರಳದ ಕೂಟುಪೊಳೆಯ ವಳವುಪಾರೆ ಎಂಬ ಸ್ಥಳಕ್ಕೆ ಆಗಮಿಸುತ್ತಾರೆ.

ಇತ್ತ ಬೆಂಗಳೂರಿನಲ್ಲಿ ನಿಲುಗಡೆಗೊಳಿಸಿದ್ದ ಪಿಕ್‌ಅಪ್ ವಾಹನದಲ್ಲಿ ಓರ್ವ ಆರೋಪಿಯು ಲಾರಿಯ ಬೆಂಗಾವಲಾಗಿ ಬರುತ್ತಿರುತ್ತಾನೆ. ಕರ್ನಾಟಕ ಗಡಿಯನ್ನು ದಾಟಿದ ಎರಡು ವಾಹನಗಳು ವಳವುಪಾರ ಎಂಬ ಸ್ಥಳದಲ್ಲಿ ಲಾರಿಯಲ್ಲಿದ್ದ ಎಲ್ಲಾ ವಸ್ತುಗಳನ್ನು ಕೆಳಗಿಳಿಸಿ ವಯನಾಡ್, ಕೊಯಿಕೊಡ್, ಕೊಲ್ಲಂ, ಕಣ್ಣೂರು ಮತ್ತು ಇತರ ಸ್ಥಳಗಳಿಗೆ ರವಾನಿಸಲು ೨೨೭ ಕೆ.ಜಿ. ತೂಕದ ಗಾಂಜಾ ಪೊಟ್ಟಣಗಳನ್ನು ಪಿಕಅಪ್ ವಾಹನದಲ್ಲಿ ತುಂಬಿಸುವ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಕೇರಳ ರಾಜ್ಯದ ಅಬಕಾರಿ ಕಾನೂನು ಮತ್ತು ಜಾರಿ ಇಲಾಖೆ ತಂಡವು ದಾಳಿ ನಡೆಸಿದ್ದಾರೆ. ದಾಳಿ ವೇಳೆಯಲ್ಲಿ ಕೇರಳ ರಾಜ್ಯದ ವಿವಿಧ ಸ್ಥಳಕ್ಕೆ ರವಾನಿಸಲು ಸಿದ್ದಗೊಂಡಿದ್ದ ೨೨೭ ಕೆ.ಜಿ ಗಾಂಜಾ ಪೊಟ್ಟಣಗಳನ್ನು ವಶಕ್ಕೆ ಪಡೆದ ಪೊಲೀಸರು ಮಾಲುಗಳ ಮಾರುಕಟ್ಟೆಯ ಮೌಲ್ಯವು ಸುಮಾರು ೨ ಕೋಟಿ ರೂಗಳಾಗಿರಬಹುದು ಎಂದು ಅಂದಾಜಿಸಿದ್ದಾರೆ. ಅಲ್ಲದೆ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಹಾಗೂ ಪಿಕ್‌ಅಪ್ ವಾಹನದ ಚಾಲಕನನ್ನು ಬಂಧಿಸಿ ಮೂವರ ಮೇಲೆ ಇರಿಟ್ಟಿ ಪೊಲೀಸ್ ಠಾಣೆಯಲ್ಲಿ ಕೇರಳ ರಾಜ್ಯ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇರಳ ರಾಜ್ಯದ ಅಬಕಾರಿ ವಿಶೇಷ ತನಿಖಾ ದಳದ ವೃತ್ತ ನಿರೀಕ್ಷಕ ಟಿ.ಅನಿಲ್ ಕುಮಾರ್ ಅವರು, ಕಳೆದ ಮೂರು ನಾಲ್ಕು ದಿನಗಳ ಹಿಂದೆ ಗಾಂಜಾ ಸಾಗಾಟದ ಬಗ್ಗೆ ಮಾಹಿತಿಯು ಇಲಾಖೆಗೆ ಲಭಿಸಿತ್ತು. ಇಲಾಖೆಯ ಸಿಬ್ಬಂದಿಗಳು ಲಾರಿ ಮತ್ತು ಪಿಕ್‌ಅಪ್ ವಾಹನದ ದಾಖಲೆಗಳನ್ನು ಪಡೆದುಕೊಂಡು ಬೆಂಗಳೂರಿಗೆ ತೆರಳಿದ್ದರು. ಅಲ್ಲಿಂದ ವಾಹನಗಳನ್ನು ಹಿಂಬಾಲಿಸಿಕೊAಡು ರಾಜ್ಯದಲ್ಲೇ ಅರೋಪಿಗಳನ್ನು ಮಾಲು ಸಮೇತವಾಗಿ ಬಂಧಿಸಲು ವ್ಯವಸ್ಥಿತ ಪೂರ್ವ ಯೋಜನೆ ರೂಪಿಸಲಾಗಿತ್ತು. ಅಂತೆಯೇ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಪ್ರಮುಖ ಮಾರಾಟಗಾರನೊಬ್ಬನÀ ಬೇನಾಮಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.