ಮಡಿಕೇರಿ, ಡಿ. ೧೧: ಕೊಡಗು ಜಿಲ್ಲೆಯ ಮೂಲದ ಕೆ.ಎ.ಎಸ್. ಶ್ರೇಣಿಯ ಅಧಿಕಾರಿಗಳಾಗಿ ನಾನ್ ಐ.ಪಿ.ಎಸ್. ಆಗಿ ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ ಇಬ್ಬರು ಯುವ ಅಧಿಕಾರಿಗಳಿಗೆ ಇದೀಗ ಐ.ಪಿ. ಎಸ್.ಗೆ ಬಡ್ತಿ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಮೂಲಕ ನಿನ್ನೆ ಆದೇಶ ಹೊರಡಿಸ ಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ಕೊಟ್ಟಂಗಡ ಪಿ. ಅಂಜಲಿ (ಈಗ ಬಾಚರಣಿಯಂಡ) ಅವರು ಐ.ಪಿ.ಎಸ್. ಶ್ರೇಣಿಗೆ ಬಡ್ತಿ ಹೊಂದಿದ್ದಾರೆ. ಇವರೊಂದಿಗೆ ಮಲಚೀರ ಎ. ಅಯ್ಯಪ್ಪ ಅವರು ಕೂಡ ಐಪಿಎಸ್ ಶ್ರೇಣಿಗೆ ಬಡ್ತಿ ಪಡೆದಿದ್ದಾರೆ. ಅಂಜಲಿ ಅವರು ಬಲ್ಯಮುಂಡೂರು ಮೂಲದ ವರಾದ ಕೊಟ್ಟಂಗಡ ಮಣಿ ಪೂವಯ್ಯ ಹಾಗೂ ಜಾನಕಿ ದಂಪತಿಯ ಪುತ್ರಿ. ಬಾಚರಣಿಯಂಡ ತಿಮ್ಮಯ್ಯ ಎಂ. ಅವರ ಪತ್ನಿಯಾಗಿದ್ದಾರೆ. ಅಯ್ಯಪ್ಪ ಅವರು ಕೂಡ ಜಿಲ್ಲೆಯ ಮೂಲದ ಯುವ ಅಧಿಕಾರಿಯಾಗಿದ್ದು, ಪ್ರಸ್ತುತ ಜವಾಬ್ದಾರಿಯುತ ಸ್ಥಾನದಲ್ಲಿ ಕರ್ತವ್ಯದಲ್ಲಿದ್ದಾರೆ. ಇವರು ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿ ಅಪ್ಪಣ್ಣ ಹಾಗೂ ಸರ ದಂಪತಿಯ ಪುತ್ರರಾಗಿದ್ದಾರೆ.