ವೀರಾಜಪೇಟೆ, ಡಿ. ೧೧: ಸಮೀಪದ ಹೆಗ್ಗಳ ಗ್ರಾಮದ ಪಾಲೆಟ್‌ಮಕ್ಕಿಯಲ್ಲಿರುವ ನಾಗ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಅರ್ಚಕ ವೇಣುಗೋಪಾಲ್ ಪೂಜಾ ಕಾರ್ಯವನ್ನು ನೆರವೇರಿಸಿದರು. ನಾಗ ದೇವರಿಗೆ ವಿವಿಧ ಅಭಿಷೇಕ ಮಾಡಿ ಮಹಾಮಂಗಳಾರತಿ ನಡೆಯಿತು. ಅನ್ನಸಂತರ್ಪಣೆ ನೆರವೇರಿತು.