ಕೊಡ್ಲಿಪೇಟೆ,ಡಿ.೧೧: ನಿನ್ನೆ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದ ತುಂಬು ಗರ್ಭಿಣಿ ಸದಸ್ಯೆಯೋರ್ವರು ನಂತರ ಹಾಸನದ ಆಸ್ಪತ್ರೆಗೆ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯೆ ದಾಕ್ಷಾಯಿಣಿ ಕಾಂತರಾಜ್ ಅವರು ತುಂಬು ಗರ್ಭಿಣಿ ಯಾಗಿದ್ದು, ನಿನ್ನೆ ದಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ನಂತರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಇವರನ್ನು ಪತಿ ಕಾಂತರಾಜ್ ಹಾಗೂ ಭಾವ, ಬಿಜೆಪಿ ಮುಖಂಡ ಕ್ಯಾತೆ ಶಿವು ಅವರುಗಳು ಹಾಸನದ ಆಸ್ಪತ್ರೆಗೆ ಸಾಗಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ದಾಕ್ಷಾಯಿಣಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಈರ್ವರೂ ಆರೋಗ್ಯವಾಗಿದ್ದಾರೆ.