ಸೋಮವಾರಪೇಟೆ, ಡಿ.೧೨: ರಾಜಕೀಯ ಪಕ್ಷಗಳ ಚುನಾವಣೆ ಯನ್ನೂ ಮೀರಿಸುವಂತೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆ ನಡೆದಿದ್ದು, ಸೋಮವಾರಪೇಟೆಯಲ್ಲಿ ಒಕ್ಕಲಿಗ ಸಮುದಾಯ ಬಾಂಧವರ ಚಟುವಟಿಕೆ ಜೋರಾಗಿತ್ತು.
ಜಿಲ್ಲೆಯ ಮಡಿಕೇರಿಯಲ್ಲಿ ೨ ಹಾಗೂ ಸೋಮವಾರಪೇಟೆಯಲ್ಲಿ ೨೯ ಮತಗಟ್ಟೆಗಳು ಸೇರಿದಂತೆ ಒಟ್ಟು ೩೧ ಮತಗಟ್ಟೆಗಳಲ್ಲಿ ಚುನಾವಣೆ ನಡೆಯಿತು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಯಾಗಿರುವ ಒಕ್ಕಲಿಗ ಸಮುದಾಯದ ಮತದಾರ ಸದಸ್ಯರು, ರಾಜ್ಯ ಸಂಘದ ನಿರ್ದೇಶಕ ಸ್ಥಾನಕ್ಕೆ ಕೊಡಗಿನಿಂದ ಪ್ರಾತಿನಿಧ್ಯಕ್ಕಾಗಿ ಸ್ಪರ್ಧಿಸಿರುವ ಉಮೇದುವಾರರಿಗೆ ಹೆಚ್ಚಿನ ಉತ್ಸಾಹದಿಂದ ಮತ ಚಲಾಯಿಸಿದರು.
ಸೋಮವಾರಪೇಟೆ ತಾಲೂಕಿನಲ್ಲಿ ೧೪,೫೨೭ ಹಾಗೂ ಮಡಿಕೇರಿ ತಾಲೂಕಿನಲ್ಲಿ ೬೭೮, ವೀರಾಜಪೇಟೆ ತಾಲೂಕಿನಲ್ಲಿ ೩೦೫ ಮಂದಿ ಸೇರಿದಂತೆ ಒಟ್ಟು ೧೫,೫೧೦ ಮತದಾರರು ಮತದಾನದ ಅರ್ಹತೆ ಪಡೆದಿದ್ದರು. ಅವಿಭಜಿತ ಸೋಮವಾರಪೇಟೆ ತಾಲೂಕಿನ ಮತದಾರರಿಗೆ ಪಟ್ಟಣದ ಚನ್ನಬಸಪ್ಪ ಸಭಾಂಗಣ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಹಾಗೂ ಜೂನಿಯರ್ ಕಾಲೇಜು ಕಟ್ಟಡದಲ್ಲಿ ತೆರೆಯಲಾಗಿದ್ದ ೨೯ ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನ ಮತದಾರರಿಗೆ ಮಡಿಕೇರಿ ಕೆಇಬಿ ಕಚೇರಿ ಹಿಂಭಾಗವಿರುವ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಕಟ್ಟಡದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಬೆಳಿಗ್ಗೆ ೭ಗಂಟೆ ಯಿಂದ ಸಂಜೆ ೬ ಗಂಟೆಯವರೆಗೂ ಮತದಾನ ನಡೆಯಿತು.
ಸೋಮವಾರಪೇಟೆಯ ಚೆನ್ನಬಸಪ್ಪ ಸಭಾಂಗಣದಲ್ಲಿ ತೆರೆಯಲಾಗಿದ್ದ ೪, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೯, ಜೂನಿಯರ್ ಕಾಲೇಜಿನಲ್ಲಿ ೧೩, ಪ್ರೌಢಶಾಲಾ ಕಟ್ಟಡದಲ್ಲಿ ತೆರೆಯಲಾಗಿದ್ದ ೩ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಮತದಾನ ನಡೆಯಿತು.
ಚುನಾವಣೆಗೆ ಒಟ್ಟು ೧೭೪ ಸಿಬ್ಬಂದಿಗಳನ್ನು ನೇಮಕ ಮಾಡ ಲಾಗಿತ್ತು. ಎಲ್ಲಾ ಮತಗಟ್ಟೆಗಳಲ್ಲೂ ಅಗತ್ಯ ಪೋಲೀಸ್ ಬಂದೋಬಸ್ತಿನ ವ್ಯವಸ್ಥೆ, ಸ್ಯಾನಿಟೈಜರ್ಗಳನ್ನು ಅಳವಡಿಸಿ ಉತ್ತಮ ವ್ಯವಸ್ಥೆಯೊಂದಿಗೆ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.
ಅಭ್ಯರ್ಥಿಗಳ ಭರ್ಜರಿ ಪ್ರಚಾರ: ಒಕ್ಕಲಿಗರ ಸಂಘದ ಚುನಾವಣೆಗೆ ನಾಲ್ವರು ಸ್ಪರ್ಧಿಸಿದ್ದರೂ ಮೇಲ್ನೋಟಕ್ಕೆ ಉದ್ಯಮಿ ಹಾಗೂ ದಾನಿಗಳಾಗಿ ಹೆಸರು ಮಾಡಿರುವ ರವೀಂದ್ರ ಹೆಚ್.ಎನ್.
(ಮೊದಲ ಪುಟದಿಂದ) ಹಾಗೂ ಶಿಕ್ಷಕ ಚೇತನ್ ಹೆಚ್.ಎಸ್. ಅವರುಗಳ ನಡುವೆ ಪೈಪೋಟಿ ಕಂಡುಬAತು. ಕಣದಲ್ಲಿದ್ದ ಕೊಡ್ಲಿಪೇಟೆಯ ಕೆ.ಎನ್. ಮಂಜುನಾಥ್, ಚೌಡ್ಲು ಗ್ರಾಮದ ಸಿ.ಕೆ. ರಾಜೀವ್ ಅವರುಗಳು ಸ್ವಯಂ ನಿವೃತ್ತಿ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ಈರ್ವರ ನಡುವೆ ಮಾತ್ರ ಚುನಾವಣಾ ಕಾವು ಹೆಚ್ಚಾಗಿತ್ತು.
ಮತದಾನ ದಿನವಾದ ಇಂದು ಜೂನಿಯರ್ ಕಾಲೇಜಿನಿಂದ ಅರ್ಧ ಕಿ.ಮೀ. ದೂರದವರೆಗೂ ಜನಜಂಗುಳಿ ಕಂಡುಬAತು. ಕೊಡ್ಲಿಪೇಟೆ, ಕುಶಾಲನಗರ, ಶಾಂತಳ್ಳಿ, ಮಾದಾಪುರ, ನೆಲ್ಲಿಹುದಿಕೇರಿ ಸೇರಿದಂತೆ ದೂರದ ಗ್ರಾಮಗಳಿಂದ ವಾಹನಗಳಲ್ಲಿ ತಂಡೋಪತAಡವಾಗಿ ಆಗಮಿಸಿದ ಒಕ್ಕಲಿಗರ ಸಂಘದ ಸದಸ್ಯರು, ಮತಗಟ್ಟೆಗಳ ಎದುರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಸೋಮವಾರಪೇಟೆ ತಾಲೂಕಿನಲ್ಲಿ ೧೪,೫೨೭ ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದರಿAದ ಸಹಜವಾಗಿಯೇ ಜನಜಂಗುಳಿ ಏರ್ಪಟ್ಟಿತು. ಶನಿವಾರಸಂತೆ ರಸ್ತೆಯ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಿAದ ಹಿಡಿದು ಪಟ್ಟಣದ ಆನೆಕೆರೆವರೆಗೆ, ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಚೌಡ್ಲು ದೇವಾಲಯದವರೆಗೆ ವಾಹನಗಳ ಸಂಚಾರ ದಟ್ಟಣೆ ಕಂಡುಬAತು.
ಕಣದಲ್ಲಿರುವ ಪ್ರಬಲ ಅಭ್ಯರ್ಥಿಗಳಾದ ಹರಪಳ್ಳಿ ರವೀಂದ್ರ ಹಾಗೂ ಚೇತನ್ ಹೆಚ್.ಎಸ್. ಅವರುಗಳ ಬೆಂಬಲಿಗರು ಮತದಾನ ಕೇಂದ್ರದ ಹೊರಭಾಗದಲ್ಲಿ ಜಮಾಯಿಸಿ ಅಂತಿಮ ಕ್ಷಣದಲ್ಲಿಯೂ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಹರಪಳ್ಳಿ ರವೀಂದ್ರ ಅವರ ಪರವಾಗಿ ನೂರಾರು ಬೆಂಬಲಿಗರು ಅಲ್ಲಲ್ಲಿ ಜಮಾಯಿಸಿ ಮತಯಾಚನೆ ಮಾಡುವ ಮೂಲಕ ಯಾವುದೇ ರಾಜಕೀಯ ಪಕ್ಷದ ಚುನಾವಣೆಗೂ ಕಡಿಮೆಯಿಲ್ಲ ಎಂಬAತೆ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಭಾಗಿಯಾಗಿದ್ದರು.
ಅಭ್ಯರ್ಥಿಗಳಾದ ರವೀಂದ್ರ ಹಾಗೂ ಚೇತನ್ ಅವರುಗಳು ಮತಗಟ್ಟೆಯ ಹೊರಭಾಗದಲ್ಲಿ ನಿಂತು ಮತದಾರರಿಂದ ಮತಯಾಚಿಸಿದರು. ಜೂನಿಯರ್ ಕಾಲೇಜು ವ್ಯಾಪ್ತಿಯಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದಾಗಿ ಶನಿವಾರಸಂತೆ-ಸೋಮವಾರಪೇಟೆ-ಮಡಿಕೇರಿಗೆ ತೆರಳುವ ಇತರ ವಾಹನಗಳ ಸವಾರರು ಸಮಸ್ಯೆ ಎದುರಿಸಿದರು.
ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಹಾಗೂ ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು. ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ೧೨,೬೬೬ ಮತಗಳು ಚಲಾವಣೆ ಯಾಗಿದ್ದು, ಶೇ.೮೧.೬೬ ಮತದಾನವಾಗಿದೆ.
ತಾ. ೧೫ರಂದು ಮತ ಎಣಿಕೆ: ಇಂದು ನಡೆದ ಚುನಾವಣೆಯ ಮತ ಎಣಿಕೆ ತಾ. ೧೫ರಂದು ಮಡಿಕೇರಿಯ ಐಟಿಐ ಜಂಕ್ಷನ್ ಬಳಿಯಿರುವ ಪೊಲೀಸ್ ಮೈತ್ರಿ ಸಭಾಂಗಣದಲ್ಲಿ ಬೆಳಿಗ್ಗೆ ೮ ರಿಂದ ನಡೆಯಲಿದೆ ಎಂದು ಚುನಾವಣಾಧಿಕಾರಿ ಸಲೀಂ ತಿಳಿಸಿದ್ದಾರೆ.