ಮಡಿಕೇರಿ, ಡಿ. ೧೨: ವೀರಾಜಪೇಟೆ ತಾಲೂಕಿನ ಕಂಡAಗಾಲ ಕುಟ್ಟಂದಿ ಗ್ರಾಮದ ನಿವಾಸಿ, ಚತುರ್ಭಾಷೆ ಸಾಹಿತಿ, ನಿವೃತ್ತ ಶಿಕ್ಷಕಿ ಮುಲ್ಲೇಂಗಡ ಬೇಬಿ ಚೋಂದಮ್ಮ ಅನಾರೋಗ್ಯದಿಂದ ತಾ. ೧೨ ರಂದು ನಿಧನರಾದರು.
ಕೊಡವ, ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಪುಸ್ತಕ ರಚಿಸಿ ಚತುರ್ಭಾಷಾ ಸಾಹಿತಿ ಎಂದು ಚೋಂದಮ್ಮ ಹೆಸರುವಾಸಿಯಾಗಿದ್ದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿಯೂ, ತೂಕ್ಬೊಳಕ್ ಕೊಡವ ವಾರಪತ್ರಿಕೆಯ ಉಪ ಸಂಪಾದಕಿಯಾಗಿಯೂ, ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿಯ ನಿರ್ದೇಶಕಿಯಾಗಿಯೂ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸದಸ್ಯೆಯಾಗಿಯೂ ಸೇವೆ ಸಲ್ಲಿಸುವುದರೊಂದಿಗೆ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯೆಯಾಗಿಯೂ ಇವರು ಕಾರ್ಯ ನಿರ್ವಹಿಸಿದ್ದರು.
ಚೋಂದಮ್ಮ ಅವರು ತೂಕ್ ಬೊಳಕ್ ವಾರಪತ್ರಿಕೆಯ ಸಂಪಾದಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರ ಪತ್ನಿ, ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅವರ ತಾಯಿಯಾಗಿದ್ದಾರೆ.