ಮಡಿಕೇರಿ, ಡಿ. ೧೧: ಕೊಡಗು ಹೋಂ ಸ್ಟೇ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಲೆ|| ಕ|| ಭರತ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಗೋಣಿಕೊಪ್ಪದಲ್ಲಿ ನಡೆದ ಮಹಾ ಸಭೆಯಲ್ಲಿ ಅವರು ಬಿ.ಜಿ. ಅನಂತಶಯನ ಅವರಿಂದ ಅಧಿಕಾರ ಸ್ವೀಕರಿಸಿದರು. ಪ್ರಧಾನ ಕಾರ್ಯದರ್ಶಿಯಾಗಿ ಮೋಂತಿ ಗಣೇಶ್ ಚುನಾಯಿತರಾದರು.
ಉಪಾಧ್ಯಕ್ಷರಾಗಿ ಹೇಂ ಮಾದಪ್ಪ, ಸಹ ಕಾರ್ಯದರ್ಶಿಯಾಗಿ ಬೆನ್ ಗಣಪತಿ, ಖಜಾಂಚಿಯಾಗಿ ಸವಿತಾ ಅಪ್ಪಣ್ಣ ಚುನಾಯಿತರಾದರು. ಸಮಿತಿ ಸದಸ್ಯರಾಗಿ ಎ.ಕೆ. ನವೀನ್, ಬಾಬಿ, ಸಾಗರ್ ಕೆ.ಟಿ., ಕಬೀರ್ ತಿಮ್ಮಯ್ಯ, ಕುಮಾರಿ ಕುಂಞಪ್ಪ, ಪ್ರೇಂ ದಂಬೆಕೋಡಿ, ಧನಂಜಯ ಸಿ.ಎಸ್. ಆಯ್ಕೆಯಾದರು.
ಸಲಹೆಗಾರರಾಗಿ ಕೆ.ಎಂ. ಕರುಂಬಯ್ಯ, ಮಿಕ್ಕಿ ಕಾಳಪ್ಪ, ಬಿ.ಜಿ. ಅನಂತಶಯನ, ದಿಲೀಪ್ ಚೆಂಗಪ್ಪ, ನಳಿನಿ ಅಚ್ಚಯ್ಯ, ಮದನ್ ಸೋಮಣ್ಣ, ಬಿ.ಸಿ. ಚೆಂಗಪ್ಪ ಮುಂದುವರೆಯುವರು.
ಈ ಸಂದರ್ಭ ಮಾತನಾಡಿದ ಬಿ.ಜಿ. ಅನಂತಶಯನ, ಸರಕಾರ ಕೊಡವ ಹೆರಿಟೇಜ್ ನಿರ್ಮಾಣವನ್ನು ಕೂಡಲೇ ಪೂರ್ಣಗೊಳಿಸುವಂತೆ, ಮಕ್ಕಳ ಗುಡಿ ಬೆಟ್ಟ, ಹೊನ್ನಮ್ಮನ ಕೆರೆ ಸುಸ್ಥಿತಿಯಲ್ಲಿ ಇಡುವಂತೆ, ಪರಿಸರವನ್ನು ಗಮನದಲ್ಲಿ ಇರಿಸಿಕೊಂಡು ಅಜ್ಞಾತವಾಗಿರುವ ಪ್ರವಾಸಿ ಸ್ಥಳಗಳನ್ನು ಪರಿಚಯಿಸುವಂತೆ, ಎಲ್ಲ ತಾಲೂಕುಗಳಲ್ಲೂ ಕಸ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿಯಾಗಿದ್ದ ಮೀನಾ ಕಾರ್ಯಪ್ಪ ವರದಿ ಓದಿದರು. ಖಜಾಂಚಿಯಾಗಿದ್ದ ಉಷಾ ಗಣಪತಿ ಹಣಕಾಸು ಲೆಕ್ಕ ನೀಡಿದರು. ಬಿ.ಸಿ. ಚೆಂಗಪ್ಪ, ಹೋಂಸ್ಟೇಗಳು ಗಮನಿಸಬೇಕಾದ ನೀತಿ ನಿಯಮಗಳನ್ನು ವಿವರಿಸಿದರು. ಕೆ.ಎಂ. ಕರುಂಬಯ್ಯ ಮಾತನಾಡಿ, ಹೋಂ ಸ್ಟೇ ಚಟುವಟಿಕೆ ರಾಜ್ಯಕ್ಕೆ ವಿಸ್ತರಿಸುವ ಬಗ್ಗೆ ಮಾತನಾಡಿದರು.
ಈ ಸಂದರ್ಭ ಅಸೋಸಿಯೇಷನ್ ಸದಸ್ಯರಿಗೆ ಉಚಿತವಾಗಿ ನೀಡಲು ನಿರ್ಧರಿಸಿದ ಬೋರ್ಡ್ ಅನಾವರಣ ಮಾಡಲಾಯಿತು. ಮೋಂತಿ ಗಣೇಶ್ ವಂದನಾರ್ಪಣೆ ಮಾಡಿದರು.