ಮಡಿಕೇರಿ, ಡಿ. ೧೦: ಐಕೊಳ ಗ್ರಾಮದ ಅಯ್ಯಪ್ಪ ಯುವತಿ ಮಂಡಳಿ ಹಾಗೂ ಸ್ವಸಹಾಯ ಸಂಘದ ವತಿಯಂದ ರಾಜ್ಯ ಮಟ್ಟದ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಥ್ರೋಬಾಲ್ ಹಾಗೂ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಕಿ ಪಾರೇರ ಸುಮಿ ವಸಂತ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಮಂಡಳಿಯ ಅಧ್ಯಕ್ಷೆ ಕೊಂಪುಳಿರ ಗೀತಾ ಅರುಣ್, ಕೊಂಪುಳಿರ ಶಶಿಕಲಾ ಗೋಪಾಲಕೃಷ್ಣ, ಕೊಂಪುಳಿರ ಡಾ. ಶೃತಿ ಚೇತನ್, ಕೊಂಪುಳಿರ ಚಂದ್ರಮ್ಮ ಲುಶ್ವಾಪತಿ, ಕೊಂಪುಳಿರ ಕುಸುಮ ಬೋಪಯ್ಯ, ಕೊಂಪುಳಿರ ಲೀಲಾವತಿ ಕುಮಾರಪ್ಪ, ಉಳುವಾರನ ಶೀಲಾ ಪೊನ್ನಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಕರಾಗಿ ಪಾರೇರ ದೇವಕಿ ಯತೀಶ್ ಕಾರ್ಯನಿರ್ವಹಿಸಿದರು. ಕಾರ್ಯ ಕ್ರಮದಲ್ಲಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.