ಕೂಡಿಗೆ, ಡಿ. ೧೦: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಡೈರಿ ಮುಂಭಾಗದಲ್ಲಿರುವ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ಸಹಕಾರ ದೊಂದಿಗೆ ರೂ. ೧ ಕೋಟಿ ೬೫ ಲಕ್ಷ ವೆಚ್ಚದ ನೂತನ ಕೃಷಿ ಗೋದಾಮು ಕಟ್ಟಡಕ್ಕೆ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಭೂಮಿಪೂಜೆ ನೆರವೇರಿಸಿದರು.
ಸಿದ್ದಲಿಂಗಪುರ ಮಂಜುನಾಥ ಸ್ವಾಮಿ ದೇವಾಲಯದ ರಾಜೇಶ್ ನಾರ್ಥ ಜೀ ಅವರ ಅರ್ಶಿವರ್ಚನ ದೊಂದಿಗೆ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಉಪಾಧ್ಯಕ್ಷ ಟಿ.ಪಿ. ಹಮೀದ್ ನಿರ್ದೇಶಕರಾದ ಎಸ್.ಎನ್. ರಾಜಾರಾವ್, ಕೆ.ಕೆ. ಭೋಗಪ್ಪ, ಕೆ.ಟಿ. ಅರುಣ್ ಕುಮಾರ್, ತಮ್ಮಣೆಗೌಡ, ಹೆಚ್.ಆರ್. ಪಾರ್ವತಮ್ಮ, ಕೆ.ಎನ್. ಲಕ್ಷö್ಮಣರಾಜೇ ಅರಸ್, ಕೃಷ್ಣಗೌಡ, ವಿ. ಬಸಪ್ಪ, ರಮೇಶ್, ಟಿ.ಕೆ. ವಿಶ್ವನಾಥ್, ಕೆ.ಕೆ. ಪವಿತ್ರ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನ, ಮೇಲ್ವಿಚಾರಕ ನವೀನ್ ಕುಮಾರ್, ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಸೇರಿದಂತೆ ಹಿರಿಯ ಸಹಕಾರಿಗಳಾದ ಎಂ.ಪಿ. ಕೃಷ್ಣಪ್ಪ, ಎಂ.ಬಿ. ಜಯಂತ್ ರಂಗಸ್ವಾಮಿ, ಭಾರದ್ವಾಜ್ ಸೇರಿದಂತೆ ಸಂಘದ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು ಸೇರಿದಂತೆ ನೂರಾರು ಸಂಘದ ಸದಸ್ಯರು ಹಾಜರಿದ್ದರು.