ಕೂಡಿಗೆ, ಡಿ. ೧೦: ಶಿರಂಗಾಲದ ಕಡೆಯಿಂದ ಪಿರಿಯಾಪಟ್ಟಣ ಕಡೆಗೆ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೇಧಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಹಸುಗಳನ್ನು ರಕ್ಷಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶಿರಂಗಾಲ ಗಡಿ ತಪಾಸಣಾ ಗೇಟ್ ಬಳಿ ದಾಳಿ ನಡೆಸಿದ ಸಂದರ್ಭ ಗೂಡ್ಸ್ ವಾಹನದಲ್ಲಿ (ಕೆಎ.೪೬.೨೯೪೫) ಎರಡು ಹಸುಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬAಧಿಸಿದAತೆ ಪಿರಿಯಾಪಟ್ಟಣ ತಾಲೂಕಿನ ಹಡಗನಹಳ್ಳಿಯ ಬಾಬು ಮತ್ತು ಸಲ್ಮಾನ್ ಎಂಬವರುಗಳನ್ನು ಬಂಧಿಸಲಾಗಿದೆ. ಹಸುಗಳನ್ನು ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಪಿರಿಯಾಪಟ್ಟಣದ ಕಡೆಗೆ ಖಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಸುಗಳನ್ನು ಮೈಸೂರಿನ ಗೋಶಾಲೆಗೆ ಕಳುಹಿಸಿ ಕೊಡಲಾಗಿದೆ. ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಸಹಾಯ ಠಾಣಾಧಿಕಾರಿ ರವಿ, ಸಿಬ್ಬಂದಿಗಳಾದ. ಶ್ರೀನಿವಾಸ, ಸನತ್ ಚಾಲಕ ಯೋಗೇಶ್ ಇದ್ದರು.