ಗೋಣಿಕೊಪ್ಪ ವರದಿ, ಡಿ.೧೧ : ಹಾತೂರು ಗ್ರಾಮದ ಎಚ್. ಆರ್. ಜಯಲಕ್ಷಿö್ಮ ಅವರಿಗೆ ಸೇರಿದ ಒಂದು ಎಕರೆ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ೫ ಆನೆಗಳ ಹಿಂಡು ಗಿಡವನ್ನು ಸಂಪೂರ್ಣ ನಾಶ ಮಾಡಿವೆ.

ಮರಿಯೊಂದಿಗೆ ೪ ಆನೆಗಳಿದ್ದು, ತೋಟಕ್ಕೆ ತೆರಳಲು ಭಯದ ವಾತಾವರಣ ನಿರ್ಮಾಣವಾಗಿದೆ. ೪೦೦ ಕ್ಕೂ ಹೆಚ್ಚು ಗಿಡಗಳನ್ನು ತುಳಿದು, ಸೊಂಡಿಲಿನಿAದ ಎಳೆದು ನಾಶ ಮಾಡಲಾಗಿದೆ. ೨೦ ವರ್ಷದ ಕಾಫಿ ಗಿಡ ನಾಶವಾಗಿರುವುದು ಹೆಚ್ಚು ನಷ್ಟ ಎದುರಿಸುವಂತಾಗಿದೆ. ಕಾಫಿ ಫಸಲು ಕೊಯ್ಲು ಸಂದರ್ಭವಾಗಿರುವುದರಿAದ ನಷ್ಟದ ಪ್ರಮಾಣ ಹೆಚ್ಚಾಗಿದೆ. ಬಾಳೆ, ತೆಂಗು, ಅಡಕೆ ಕೂಡ ನಾಶ ಮಾಡಿವೆ. ಸುಮಾರು ೩ ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಜಯಲಕ್ಷಿö್ಮ ತಿಳಿಸಿದ್ದಾರೆ.