ಗೋಣಿಕೊಪ್ಪ ವರದಿ, ಡಿ.೧೧: ಬೈಪಾಸ್ ರಸ್ತೆಯ ಕೈತೋಡು ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ೪ ಯಂತ್ರಗಳ ಮೂಲಕ ಕಾರ್ಯಾಚರಣೆ ಮುಂದುವರಿಸಲಾಗಿದೆ.
ತೆರವು ಕಾರ್ಯ ಹೆಚ್ಚು ತೊಂದರೆಯಾಗಿದೆ. ಮನೆ, ಕಟ್ಟಡವನ್ನು ನೀರಿನ ಸೆಳೆತದಿಂದ ತಪ್ಪಿಸಲು ಭೂಮಿಯ ಕೆಳಭಾಗದ ಆಳದಿಂದ ಕಾಂಕ್ರಿಟ್ ಹಾಕಿರುವುದರಿಂದ ಹಿಟಾಚಿಯಲ್ಲಿ ಡ್ರಿಲ್ಲಿಂಗ್ ಯಂತ್ರ ಬಳಸಿ ಗೋಡೆ ತೆರವು ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಕಬ್ಬಿಣ ಬಳಸಿ ಹಾಕಿರುವ ಗೋಡೆ ತೆಗೆಯಲು ಸಮಯ ವ್ಯರ್ಥವಾಗುತ್ತಿದೆ. ಕಂದಾಯ, ಸರ್ವೆ ಇಲಾಖೆ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ತೆರವು ಸೂಚನೆ ಅರಿತು ಒಂದಷ್ಟು ಒತ್ತುವರಿದಾರರು ಸ್ವಯಂಪ್ರೇರಿತವಾಗಿ ತಡೆಗೋಡೆ, ಗೋಡೆ ತೆಗೆದು ಕಟ್ಟಡವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ತೆರವು ಮಾಡಿದ ಜಾಗದಲ್ಲಿ ತೋಡು ಹೆಚ್ಚು ವಿಸ್ತಾರ ಹೊಂದಿರುವುದರಿAದ ನೀರು ಸರಾಗವಾಗಿ ಹರಿಯುತ್ತಿದೆ.