ಶನಿವಾರಸAತೆ, ಡಿ. ೧೦ : ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಆದರ್ಶ ಎಂಬ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೋರಗಲ್ಲು ಗ್ರಾಮದಲ್ಲಿ ನಡೆದಿದೆ.
ಕಾಲೇಜು ಮುಗಿಸಿ ಯುವತಿ ಸಂಜೆ ಮನೆಗೆ ಹಿಂತಿರುಗುತ್ತಿದ್ದಾಗ ಕೊರಗಲ್ಲು ಗ್ರಾಮದ ರಸ್ತೆಯ ಬದಿ ನಿಂತಿದ್ದ ಯುವಕ ಆದರ್ಶ ವಿದ್ಯಾರ್ಥಿನಿಗೆ ತನ್ನ ಮೊಬೈಲ್ ನೀಡುತ್ತಾ ಮಾತನಾಡಲು ಹೇಳಿದಾದ ನಿರಾಕರಿಸಿದ ವಿದ್ಯಾರ್ಥಿನಿಯ ಕೈ ಹಿಡಿದು ಯುವಕ ಬಲವಂತವಾಗಿ ಎಳೆದೊಯ್ದು ಬಾಯಿಯನ್ನು ಮುಚ್ಚಿದಾಗ ಕಿರುಚಿಕೊಂಡ ವಿದ್ಯಾರ್ಥಿನಿ ಆತನ ಕೈ ಬೆರಳನ್ನು ಕಚ್ಚಿ ತಪ್ಪಿಸಿಕೊಂಡು ಮನೆಯತ್ತ ಓಡಿ ಬಂದಿದ್ದಾಳೆ ಎನ್ನಲಾಗಿದೆ.
ವಿದ್ಯಾರ್ಥಿನಿಯ ತಾಯಿ ತಮ್ಮ ಮಗಳ ಮಾನಭಂಗಕ್ಕೆ ಯತ್ನಿಸಿದ ಯುವಕನ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಮತ್ತು ೩೫೪ ಐಪಿಸಿ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಹೆಡ್‌ಕಾನ್ಸ್ಟೇಬಲ್ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.