ಮಡಿಕೇರಿ, ಡಿ.೯ : ಶ್ರೀ ಸುಬ್ರಹ್ಮಣ್ಯ ಷಷ್ಠಿ ಉತ್ಸವವನ್ನು ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಉತ್ಸವ ಸಂಬAಧ ಎಲ್ಲಾ ದೇವಾಲಯಗಳಲ್ಲಿ ವಿಶೇಷ

ಪೂಜೆ, ಅಭಿಷೇಕ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಜಿಲ್ಲೆಯ ಪ್ರಮುಖ ದೇವಾಲಯವಾದ ಬೈರಂಬಾಡ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ಕೂಡಿಗೆಯ ಉದ್ಭವ ಸುಬ್ರಹ್ಮಣ್ಯ ದೇವಾಲಯ, ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ, ಶ್ರೀ ಮುತ್ತಪ್ಪ ದೇಗುಲದ ಆವರಣದಲ್ಲಿರುವ ಸುಬ್ರಹ್ಮಣ್ಯ ದೇವಾಲಯಗಳು ಹಾಗೂ ಜಿಲ್ಲೆಯ ಇತರ ದೇವಾಲಯಗಳಲ್ಲಿ ಪೂಜಾದಿ ಕಾರ್ಯಗಳು ನೆರವೇರಿದವು.

ಬೈರಂಬಾಡದಲ್ಲಿ

ವೀರಾಜಪೇಟೆ: ದಕ್ಷಿಣ ಕೊಡಗಿನ ಕಿರು ಕುಕ್ಕೆ ಸುಬ್ರಹ್ಮಣ್ಯ ಖ್ಯಾತಿಯ ಬೈರಂಬಾಡ ಗ್ರಾಮದಲ್ಲಿ ನೆಲೆಕಂಡ ಶ್ರೀ ಸುಬ್ರಹ್ಮಣ್ಯ ಷಷ್ಠಿಪೂಜೆಯು ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿ ಮುಂಜಾನೆಯಿAದ ವಿವಿಧ ಬಗೆಯ

(ಮೊದಲ ಪುಟದಿಂದ) ಅಭಿಷೇಕಗಳು ಜರುಗಿದವು. ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನೈವೇದ್ಯ ಅರ್ಪಿಸಿ ಮಧ್ಯಾಹ್ನ ೧೨ ಗಂಟೆ ಭಕ್ತರ ಘೋಷದೊಂದಿಗೆ ಗಂಟೆಗಳ ನಿನಾದದೊಂದಿಗೆ ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ಮತ್ತು ರಘುಪತಿ ಭಟ್, ಇತರ ಪುರೋಹಿತ ಸಮ್ಮುಖದಲ್ಲಿ ಶ್ರೀ ಸ್ವಾಮಿಗೆ ಮಹಾ ಮಂಗಳಾರತಿ ಹಾಗೂ ಮಹಾಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸರ್ಕಾರದ ಆದೇಶದಂತೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಮುಂಜಾನೆ ಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು. ಕೆಲವು ಭಕ್ತರು ದೇವಾಲಯದ ಆವರಣ ಮುಖಮಂಟಪದ ಬಳಿಯ ಆಲದ ಮರದ ತಳದಲ್ಲಿ ನಾಗ ಬನದ ಪತ್ರಿಮೆಗಳಿಗೆ ಹಾಲು ಎರೆದು ಪೂಜೆ ಸಲ್ಲಿಸಿ ಮುಂದೆ ಸಾಗುತ್ತಿದ್ದರು. ಆಲಯದ ಅನತಿ ದೂರದಲ್ಲಿ ಹರಕೆಯನ್ನು ಹೊತ್ತ ದಂಪತಿಗಳು ಮಗುವಿನ ಮುಡಿ ಸೇವೆ ಸಲ್ಲಿಸಿದರು. ಭಕ್ತರಿಂದ ಹರಕೆಗಳ ಸೇವೆ ಶ್ರೀ ಸ್ವಾಮಿಗೆ ಸಲ್ಲಿಕೆಯಾದವು.

ಪತ್ರಿಕೆಯೊಂದಿಗೆ ಮಾತನಾಡಿದ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟೀರ ಬೆಳ್ಯಪ್ಪ ಅವರು ಸರ್ಕಾರದ ಮತ್ತು ಜಿಲ್ಲಾಡಳಿತದ ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ಉತ್ಸವವನ್ನು ಆಚರಿಸಲಾಗಿದೆ. ವರ್ಷಂಪ್ರತಿ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತಿತ್ತು. ಅದರೆ ಸತತ ಎರಡು ವರ್ಷಗಳಿಂದ ಅನ್ನಸಂತರ್ಪಣೆ ಕಾರ್ಯವನ್ನು ಸ್ಥಗಿತಗೊಳಿಸಿ ಅಡಂಭರವಿಲ್ಲದೆ ದೇವರಿಗೆ ಸಲ್ಲುವ ಎಲ್ಲಾ ಸೇವೆಗಳಿಗೆ ಚ್ಯುತಿಬಾರದ ರೀತಿಯಲ್ಲಿ ಹಬ್ಬ ಅಚರಿಸಲಾಗಿದೆ ಎಂದು ಹೇಳಿದರು. ಉತ್ಸವ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾದ ವೇಣು, ಮುತ್ತಣ್ಣ,ಕಿಶನ್, ಮಾದಪ್ಪ, ಉತ್ತಯ್ಯ ಮತ್ತು ಪೆಮ್ಮಯ್ಯ ದೇವಾಲಯದ ಆರ್ಚಕ ವರ್ಗ, ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀ ಸ್ವಾಮಿಯ ಅನುಗ್ರಹ ಪಡೆದರು.ಮಡಿಕೇರಿಯಲ್ಲಿ

ಮಡಿಕೇರಿ: ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗಿದ್ದು, ಅನ್ನ ಸಂತರ್ಪಣೆ ಬದಲಿಗೆ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಇಲ್ಲಿನ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಗೆ ವಿವಿಧ ಅಭಿಷೇಕಗಳೊಂದಿಗೆ ವಿವಿಧ ಸೇವೆಗಳು ನಡೆದವು. ಮಧ್ಯಾಹ್ನ ಮಹಾ ಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು. ಸಂಜೆ ಭಜನೆ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.

ಕೂಡಿಗೆ: ಕೂಡಿಗೆಯ ಟಾಟಾ ಕಾಫಿ ವರ್ಕ್ಸ್ನ ಆವರಣದಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ೫೩ ನೇ ಷಷ್ಠಿಯ ರಥೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.

ರಥೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ರಥವನ್ನು ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ಬೆಳಿಗ್ಗೆ ೬ಗಂಟೆಯಿAದಲೇ ಗಣಪತಿ ಹೋಮ, ಪುಣ್ಯಾಹಃ ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಹೋಮ ಸೇರಿದಂತೆ ಸುಬ್ರಹ್ಮಣ್ಯ ಸ್ವಾಮಿಗೆ ವಿವಿಧ ಅಭಿಷೇಕ ಮಹಾ ಪೂಜೆ, ನಂತರ ಮಹಾಮಂಗಳಾರತಿ ನೆರವೇರಿತು. ನಂತರ ರಥ ಬಲಿ ನಡೆದ ಬಳಿಕ ಪೂಜೆ ಸಲ್ಲಿಸಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹವನ್ನು ಅಲಂಕೃತವಾದ ರಥದಲ್ಲಿ ಕುಳ್ಳಿರಿಸಿ ದೇವಾಲಯ ಆವರಣದಲ್ಲಿ ಸ್ವಲ್ಪ ದೂರದವರೆಗೆ ಭಕ್ತರ ಜೈಘೋಷದೊಂದಿಗೆ ಎಳೆಯಲಾಯಿತು. ಈ ಸಂದರ್ಭದಲ್ಲಿ ಅಯ್ಯಪ್ಪ ವೃತಧಾರಿಗಳು ಅಯ್ಯಪ್ಪನ ನಾಮ ಸ್ಮರಣೆ ಮಾಡಿ ಕರ್ಪೂರ ಹಚ್ಚಿಸಿದರು. ಪೂಜಾ ಕೈಂಕರ್ಯವನ್ನು ದೇವಾಲಯ ಪ್ರಧಾನ ಅರ್ಚಕ ನವೀನ್ ಭಟ್, ಬೆಂಗಳೂರಿನ ಅನಂತ್ ಪ್ರಕಾಶ್ ತಂಡದವರು ನೆರವೇರಿಸಿದರು.

ಜಿಲ್ಲೆಯ ವಿವಿಧೆಡೆಗಳಿಂದ ಬೆಳಿಗ್ಗೆನಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ತೆರಳಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಬೋಸ್ ಮಂದಣ್ಣ, ಸಮಿತಿಯವರು, ಕೂಡುಮಂಗಳೂರು ಗ್ರಾಮ ಪ್ರಮುಖರಾದ ಕೆ.ಟಿ. ಅರುಣುಕುಮಾರ್, ತಂಗಮಣಿ, ನಂದಕುಮಾರ್, ಸುರೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ವೀರಾಜಪೇಟೆ: ನಗರದ ತೆಲುಗರ ಬೀದಿಯಲ್ಲಿರುವ ಶ್ರೀ ದಕ್ಷಿಣಾ ಮಾರಿಯಮ್ಮ ದೇವಾಲಯದಲ್ಲಿ ಷಷ್ಠಿ ಉತ್ಸವ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀ ದೇವಿಗೆ ವಿಶೇಷ ಅಲಂಕಾರ ಹಾಗೂ ಆವರಣದಲ್ಲಿ ನಾಗಬನದಲ್ಲಿ ವಿಶೇಷ ಪೂಜೆಗಳು ನಡೆಯಿತು ಮಧ್ಯಾಹ್ನ ೧-೦೦ ಗಂಟೆಯ ವೇಳೆಗೆ ವಿಶೇಷ ಮಹಾಪೂಜೆ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಗರವಲ್ಲದೆ ಸ್ಥಳೀಯ ಗ್ರಾಮಗಳಿಂದ ಅನೇಕ ಭಕ್ತರು ಆಗಮಿಸಿ ದೇವಿಯ ಅನುಗ್ರಹವನ್ನು ಪಡೆದು ಪುನಿತರಾದರು.

ಸಿದ್ದಾಪುರ: ಸಿದ್ದಾಪುರದ ಸುತ್ತಮುತ್ತಲಿನ ದೇವಾಲಯಗಳಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಿದ್ದಾಪುರದ ಮಡಿಕೇರಿ ರಸ್ತೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಸುಬ್ರಹ್ಮಣ್ಯ ಆರಾಧನೆ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಪ್ರಮುಖರಾದ ಮಣಿನಾರಾಯಣ ಇನ್ನಿತರರು ಹಾಜರಿದ್ದರು.

ಹೈಸ್ಕೂಲ್ ಪೈಸಾರಿಯಲ್ಲಿ: ಸಿದ್ದಾಪುರದ ಹೈಸ್ಕೂಲ್ ಪೈಸಾರಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಆಚರಿಸಲಾಯಿತು. ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ದೇವಾಲಯದ ಪ್ರಮುಖರಾದ ಕೆ. ಪ್ರೇಮರಾಜ್ ಮತ್ತು ಕಾರ್ತಿಕ್ ಇನ್ನಿತರರು ಹಾಜರಿದ್ದರು.