ಮಡಿಕೇರಿ ಡಿ.೯ : ಕೊಡವ ಜನಾಂಗವನ್ನು ಸರಕಾರಿ ದಾಖಲೆಗಳಲ್ಲಿ ಕೊಡಗರು ಎಂದು ನಮೂದಿಸಬಾರದು, ಬದಲಿಗೆ ಶಾಸ್ತಿçÃಯವಾಗಿ ಕೊಡವ ಎಂದು ಪರಿಗಣಿಸಲು ನ್ಯಾಯಾಲಯದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರಿ ದಾಖಲೆಗಳಲ್ಲಿ “ಕೊಡವ” ಎಂದು ನಮೂದಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿರುವ ತೀರ್ಪನ್ನು ತಾ.೮ ರಂದು ಹೈಕೋರ್ಟ್ ಪ್ರಕಟಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
೨೦೦೨ ರಲ್ಲಿ ಕೊಡವರನ್ನು ‘ಹಿಂದುಳಿದ ವರ್ಗ ೧೧೧(ಎ)’ ಗೆ ಸೇರಿದವರೆಂದು ಪಟ್ಟಿ ಮಾಡಿ ಅಧಿಸೂಚನೆಯಲ್ಲಿ "ಕೊಡಗರು" ಎಂದು ವರ್ಗೀಕರಿಸಲಾಗಿದೆ ಮತ್ತು ಸೂಚಿಸಲಾಗಿದೆ. ಕೊಡವ ಅಥವಾ ಕೊಡವರು ಎಂದು ಬದಲಾಯಿಸಲು ಹಿಂದುಳಿದ ವರ್ಗಗಳ ಆಯೋಗ ಮಾಡಿದ ಶಿಫಾರಸ್ಸು ಸರಕಾರ ದಿಂದ ತಿರಸ್ಕರಿಸ ಲ್ಪಟ್ಟಿತು. ಈ ನಿರಾಕ ರಣೆಯನ್ನು ಸಿಎನ್ಸಿ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು.
ಸರಕಾರದ ನಿರಾಕರಣೆ ಕಾನೂನು ಬಾಹಿರವೆಂದು ನ್ಯಾಯಾಲಯದಲ್ಲಿ ಪರಿಗಣಿಸಲ್ಪಟ್ಟಿದೆ ಮತ್ತು ಸರ್ಕಾರದ ಅಧಿಸೂಚನೆಯಲ್ಲಿ ಕೊಡಗರು ಬದಲಿಗೆ ಕೊಡವರು ಅಥವಾ ಕೊಡವ ಎಂದು ಬದಲಾಯಿಸಲು ಸರಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದರು.
ಕೊಡವ ಜನಾಂಗವನ್ನು ಸರಕಾರಿ ದಾಖಲೆಗಳಲ್ಲಿ ಕೊಡಗರು ಎಂದು ಅರ್ಥಹೀನವಾಗಿ ನಮೂದಿಸಿತ್ತು. ಈ ಕ್ರಮವನ್ನು ಸಿಎನ್ಸಿ ಪ್ರಶ್ನಿಸಿತು, ಅಲ್ಲದೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿತು.
(ಮೊದಲ ಪುಟದಿಂದ) ೨೦೦೯ ರಲ್ಲಿ ಡಾ.ದ್ವಾರಕಾನಾಥ್ ಆಯೋಗಕ್ಕೆ ಇದನ್ನು ಮನವರಿಕೆ ಮಾಡಿಕೊಡಲಾಯಿತು.
ಆಯೋಗವು ಕಾಗುಣಿತ ದೋಷ ತಿದ್ದುಪಡಿಗೆ ಶಿಫಾರಸ್ಸು ಮಾಡಿತು. ಅಲ್ಲದೆ ಕೊಡಗರ ಬದಲಿಗೆ ಕೊಡವ ಅಥವಾ ಕೊಡವರು ಎಂದು ಕರೆಯಬೇಕೆಂದು ತಿಳಿಸಿತು. ಸರಕಾರ ವರದಿಯನ್ನು ಅಂಗೀಕರಿಸಿತು, ಆದರೆ ಜಾರಿಗೊಳಿಸಲಿಲ್ಲ ಮತ್ತು ಯಾವುದೇ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಿಲ್ಲ.
ಆದ್ದರಿಂದ ಸಿಎನ್ಸಿ ತನ್ನ ನ್ಯಾಯವಾದಿ ಬಲ್ಲಚಂಡ ಬೊಳ್ಳಿಯಪ್ಪ ಅವರ ಮೂಲಕ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತು. ಹಲವು ಮಧ್ಯಂತರ ಆದೇಶಗಳು ಮತ್ತು ನ್ಯಾಯಾಲಯದ ನಿರ್ದೇಶನಗಳ ನಂತರವೂ ಅಧಿಕಾರಶಾಹಿ ನ್ಯಾಯಾಲಯದ ಆದೇಶಗಳನ್ನೇ ಉಲ್ಲಂಘಿಸಿತು. ಆದರೆ ಸಿಎನ್ಸಿ ತನ್ನ ಕಾನೂನು ಹೋರಾಟವನ್ನು ನಿಲ್ಲಿಸದೆ ಬೊಳ್ಳಿಯಪ್ಪ ಅವರ ಮೂಲಕ ಮುಂದುವರಿಸಿತು. ಸುಮಾರು ೭ ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಜಯ ನಮ್ಮ ಪರವಾಗಿದೆ ಎಂದು ನಾಚಪ್ಪ ತಿಳಿಸಿದರು.
ವಕೀಲ ಬಲ್ಲಚಂಡ ಬೊಳ್ಳಿಯಪ್ಪ ಹಾಗೂ ಡಾ ಸಿ.ಎಸ್.ದ್ವಾರಕಾನಾಥ್ ಅವರ ಕೊಡುಗೆಯನ್ನು ಮತ್ತು ತಮ್ಮ ಹೋರಾಟದ ಜೊತೆಗಿದ್ದ ಸಿಎನ್ಸಿ ಸ್ವಯಂ ಸೇವಕರ ಸಹಕಾರವನ್ನು ಇದೇ ಸಂದರ್ಭ ಸ್ಮರಿಸಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ನ್ಯಾಯ ಸಿಗುವುದು ವಿಳಂಬವಾಗಬಹುದು, ಆದರೆ ನ್ಯಾಯವನ್ನು ನಿರಾಕರಿಸಲಾಗುವುದಿಲ್ಲ. ಕೊಡವ ಜನಾಂಗದ ಪ್ರಕರಣದಲ್ಲಿ ಇದು ನಿಜವಾಗಿದೆ ಎಂದರು.
ಕೊಡವ ಜನಾಂಗದAತಹ ‘miಛಿಡಿo miಟಿoಡಿiಣಥಿ ಣಡಿibಚಿಟ ಖಚಿಛಿe’ ನ್ನು ಉಳಿಸಲು ನ್ಯಾಯಾಂಗದಿAದ ಮಾತ್ರ ಸಾಧ್ಯ. ಕೊಡವ ಜನಾಂಗದ ಭರವಸೆಯ ಕಿರಣವೆಂದರೆ ಅದು ನ್ಯಾಯಾಂಗ ಎಂದು ನಾಚಪ್ಪ ಅಭಿಪ್ರಾಯಪಟ್ಟರು.