ಮಡಿಕೇರಿ, ಡಿ. ೧೦ : ಪ್ರಸಕ್ತ(೨೦೨೧-೨೨) ಸಾಲಿನ ಬಿ.ಇಡಿ ಕೋರ್ಸ್ನ ದಾಖಲಾತಿಗಾಗಿ ಸರ್ಕಾರಿ ಕೋಟಾದ ಸೀಟುಗಳನ್ನು ಭರ್ತಿ ಮಾಡುವ ಸಂಬAಧ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸಿ ನಿಯಮಾನುಸಾರ ಮೆರಿಟ್ ಮತ್ತು ರೋಸ್ಟರ್ ನಿಯಮಗಳನ್ವಯ ಅರ್ಹತೆ ಹೊಂದಿದ್ದ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ನವೆಂಬರ್, ೩೦ ರಂದು ಇಲಾಖಾ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ನಲ್ಲಿ ಪ್ರಕಟಿಸಲಾಗಿದೆ.

ಈ ಆಯ್ಕೆ ಹಾಗೂ ಅರ್ಹತಾ ಪಟ್ಟಿಯಲ್ಲಿನ ಎಲ್ಲಾ ಅಭ್ಯರ್ಥಿಗಳು ನೋಡಲ್/ವ್ಯವಸ್ಥಾಪಕ ಕೇಂದ್ರಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ತಾ. ೧೪ ರವರೆಗೆ ಕಾಲಾವಕಾಶ ನೀಡಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಮೂಲದಾಖಲೆಗಳ ಪರಿಶೀಲನೆಗೆ ಹಾಜರಾಗುವುದು. ಹಾಜರಾಗದ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಕೌನ್ಸಿಲಿಂಗ್‌ಗೆ ಪರಿಗಣಿಸಲಾಗುವುದಿಲ್ಲ ಎಂದು ಬೆಂಗಳೂರು ಕೇಂದ್ರೀಕೃತ ದಾಖಲಾತಿ ಘಟಕದವರು ತಿಳಿಸಿದ್ದು, ಕಡ್ಡಾಯವಾಗಿ ಅಭ್ಯರ್ಥಿಗಳು ಮೂಲದಾಖಲೆಗಳೊಂದಿಗೆ ನೋಡಲ್/ ವ್ಯವಸ್ಥಾಪಕ ಕೇಂದ್ರಗಳಲ್ಲಿ ಹಾಜರಾಗುವುದು. ಹೆಚ್ಚಿನ ಮಾಹಿತಿಗೆ ಸಾವಿತ್ರಿ ಬಿ.ಬಿ ನೋಡಲ್ ಅಧಿಕಾರಿಯವರ ದೂ.ಸಂ.೯೯೦೦೪೫೭೦೪೦ ಯನ್ನು ಸಂಪರ್ಕಿಸಬಹುದು ಎಂದು ಕೂಡಿಗೆ ಡಯಟ್‌ನ ಉಪನಿರ್ದೇಶಕರು ಮತ್ತು ಪ್ರಾಂಶುಪಾಲರು ತಿಳಿಸಿದ್ದಾರೆ.