ಕೂಡಿಗೆ, ಡಿ. ೧೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ, ಹುದುಗೂರು ಸಮೀಪದ ಕಕ್ಕೆ ಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ದುರಸ್ತಿಪಡಿಸಿ ಅವುಗಳಿಗೆ ಸುಣ್ಣ ಮತ್ತು ಬಣ್ಣ ಹೊಡೆಯುವ ಕಾರ್ಯ ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಯುತ್ತಿದೆ.

ಕುಶಾಲನಗರ ಕೂಡಿಗೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಈ ರಸ್ತೆಯ ವಿಭಜಕ ರಸ್ತೆಯ ಕಾಮಗಾರಿಗಳು ನಡೆದಿದ್ದವು. ವಿಭಜಕದ ಸ್ಥಳಕ್ಕೆ ಟೈಲ್ಸ್ ಅಳವಡಿಕೆಯ ಕಾರ್ಯ ಭರದಿಂದ ನಡೆಯುತ್ತಿದೆ.