ಸಿದ್ದಾಪುರ, ಡಿ. ೧೦: ಅಮ್ಮತ್ತಿ ಒಂಟಿಯAಗಡಿಯ ಚಾಮುಂಡಿ ಪೈಸಾರಿ ನಿವಾಸಿ ವಿಜಿ ಅಗಸ್ಟಿನ್ ಎಂಬವರ ಮನೆಯ ಒಳಗಿದ್ದ ನಾಗರ ಹಾವನ್ನು ಅಮ್ಮತ್ತಿ ಗ್ರಾಮದ ಉರಗ ಪ್ರೇಮಿ ಸಜೀರ್ ಸೆರೆ ಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಸಜೀರ್ ಈಗಾಗಲೇ ೨೦೦ಕ್ಕೂ ಅಧಿಕ ಹಾವುಗಳನ್ನು ಸೆರೆಹಿಡಿದಿದ್ದಾರೆ.