ಮಡಿಕೇರಿ, ಡಿ. ೯: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ರಾಜ್ಯ ವಿಧಾನ ಪರಿಷತ್ಗೆ ನಿಗದಿಯಾಗಿರುವ ಚುನಾವಣೆ ತಾ. ೧೦ರಂದು (ಇಂದು) ಮತದಾನ ನಡೆಯಲಿದೆ. ವ್ಯವಸ್ಥಿತವಾದ ಹಾಗೂ ಶಾಂತಿಯುತ ಮತದಾನ ಪ್ರಕ್ರಿಯೆಗಾಗಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಸುಸೂತ್ರ ಮತದಾನಕ್ಕಾಗಿ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು ತಾ. ೯ರಂದು ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಮತದಾನ ಕರ್ತವ್ಯಕ್ಕಾಗಿ ನಿಯೋಜಿತರಾಗಿರುವ ಸಿಬ್ಬಂದಿಗಳು ಮಸ್ಟರಿಂಗ್ ಕೇಂದ್ರದಿAದ ಅಗತ್ಯ ಸಿದ್ಧತೆಯೊಂದಿಗೆ ತಮ್ಮ ತಮ್ಮ ಕೇಂದ್ರಗಳತ್ತ ತೆರಳಿದರು. ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪವಿಭಾಗಧಿಕಾರಿ ಈಶ್ವರ್ಕುಮಾರ್ ಖಂಡು, ತಹಶೀಲ್ದಾರ್ ಮಹೇಶ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಸುಜಾ ಕುಶಾಲಪ್ಪ v/s ಮಂತರ್ಗೌಡ
ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈ ಬಾರಿ ನೇರ ಸ್ಪರ್ಧೆ ನಡೆಯುತ್ತಿದೆ. ಬಿಜೆಪಿಯಿಂದ ಎಂ.ಪಿ. ಸುಜಾಕುಶಾಲಪ್ಪ ಕಣದಲ್ಲಿದ್ದರೆ ಕಾಂಗ್ರೆಸ್ನಿAದ ಡಾ|| ಮಂತರ್ಗೌಡ ಸ್ಪರ್ಧಿಯಾಗಿದ್ದಾರೆ. ಇವರುಗಳ ನಡುವಿನ ನೇರ ಹಣಾಹಣಿ ಜಿಲ್ಲೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಮತದಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟು ೧೦೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳಿಗೂ ಕೇಂದ್ರ ಸರಕಾರಿ ನೌಕರರನ್ನು ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ೪೦ ಸೂಕ್ಷö್ಮ, ೧೧ ಅತಿ ಸೂಕ್ಷö್ಮ ಮತ್ತು ೧ ನಕ್ಸಲ್ ಪೀಡಿತ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಬೆಳಿಗ್ಗೆ ೮ ರಿಂದ ಸಂಜೆ ೪ರ ತನಕ ಮತದಾನ ಜರುಗಲಿದೆ.
ಒಟ್ಟು ೧೩೨೯ ಮತದಾರರು
೧೦೪ ಗ್ರಾ.ಪಂ.ಗಳ ೧೨೪೭ ಮತದಾರರು, ಸಂಸದರು, ಶಾಸಕರು, ಎಂ.ಎಲ್.ಸಿ.ಗಳು ಸೇರಿ ಮಡಿಕೇರಿ ನಗರಸಭೆಯಲ್ಲಿ ೨೭, ಕುಶಾಲನಗರ ಪ.ಪಂ. ೧೯, ಸೋಮವಾರಪೇಟೆ ೧೪ ಹಾಗೂ ವೀರಾಜಪೇಟೆ ಪ.ಪಂ.ನ ೨೨ ಸದಸ್ಯರು ಸೇರಿ ಒಟ್ಟು ೧೩೨೯ ಮಂದಿಗೆ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾವಣೆಯ ಹಕ್ಕಿದೆ.
ಮತದಾನದ ಬಳಿಕ ಡಿಮಸ್ಟರಿಂಗ್ ಕಾರ್ಯವೂ ಸಂತ ಜೋಸೆಫರ ಶಾಲೆಯಲ್ಲಿ ನಡೆಯಲಿದೆ. ತಾ. ೧೪ರಂದು ಮತ ಎಣಿಕೆ ಜರುಗಲಿದ್ದು, ಜಿಲ್ಲೆಯನ್ನು ಪ್ರತಿನಿಧಿಸುವ ನೂತನ ಎಂ.ಎಲ್.ಸಿ. ಯಾರೆಂಬದು ನಿರ್ಧಾರವಾಗಲಿದೆ.