ತಮಿಳುನಾಡು, ಡಿ. ೮: ಭಾರತೀಯ ರಕ್ಷಣಾ ಪಡೆಯ ಮೊದಲ ಸಿ.ಡಿ.ಎಸ್ (ಅhieಜಿ ಔಜಿ ಆeಜಿeಟಿse Sಣಚಿಜಿಜಿ ಔಜಿ ಖಿhe Iಟಿಜiಚಿಟಿ ಂಡಿmeಜ ಈoಡಿಛಿes) ಜನರಲ್ ಬಿಪಿನ್ ಲಕ್ಷö್ಮಣ್ ಸಿಂಗ್ ರಾವತ್ ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಒi-೧೭ಗಿ೫ ಹೆಲಿಕಾಪ್ಟರ್, ತಮಿಳುನಾಡಿನ ನೀಲ್‌ಗಿರೀಸ್‌ನ ಕೂನೂರು ತಾಲೂಕಿನ ಕಟ್ಟೇರಿ ಎಂಬ ಸ್ಥಳದ ಟೀ-ತೋಟವೊಂದರಲ್ಲಿ ಅವಘಡಕ್ಕೀಡಾದ ಪರಿಣಾಮ ರಾವತ್ (೬೩), ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿದ್ದ ೧೪ ಮಂದಿಯ ಪೈಕಿ ೧೩ ಮಂದಿ ಮೃತಪಟ್ಟಿದ್ದಾರೆ. ಮತ್ತೋರ್ವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಿಗ್ಗೆ ೯ ಗಂಟೆಗೆ ನವದೆಹಲಿಯಿಂದ ವಿಶೇಷ ವಿಮಾನವೊಂದರ ಮೂಲಕ ತಮಿಳುನಾಡಿನ ಸೂಲೂರ್ ಏರ್‌ಬೇಸ್ ಗೆ ರಾವತ್ ದಂಪತಿ ಆಗಮಿಸಿದ್ದರು. ವಾಯುಪಡೆಯ ಒi-೧೭ಗಿ೫ ಹೆಲಿಕಾಪ್ಟರ್, ೪ ಮಂದಿ ‘ಫ್ಲೆöÊಟ್ ಕ್ರೂ’ ಹಾಗೂ ೯ ಪ್ರಯಾಣಿಕರನ್ನು ಒಳಗೊಂಡAತೆ ಒಟ್ಟು ೧೪ ಮಂದಿಯೊAದಿಗೆ ಸುಮಾರು ೧೧.೪೫ ಕ್ಕೆ ಉಡಾವಣೆ ಪ್ರಾರಂಭ ಮಾಡಿತು. ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜು-ವೆಲ್ಲಿಂಗ್‌ಟನ್‌ನಲ್ಲಿ ಉಪನ್ಯಾಸ ಕಾರ್ಯಕ್ರಮಕ್ಕೆ ರಾವತ್ ಅವರು ತೆರಳಬೇಕಾಗಿತ್ತು. ಆದರೆ ದಾರಿ ಮಧ್ಯೆ ಸುಮಾರು ೧೨ ಗಂಟೆಗೆ ಕಟ್ಟೇರಿ ಎಂಬ ಸ್ಥಳದಲ್ಲಿ ಟೀ-ತೋಟವೊಂದರಲ್ಲಿ ಹೆಲಿಕಾಪ್ಟರ್ ಅವಘಡಕ್ಕೀಡಾದ ಪರಿಣಾಮ ರಾವತ್ ದಂಪತಿ ಸೇರಿದಂತೆ ೧೩ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೆಲಿಕಾಪ್ಟರ್ ಅವಘಡಕ್ಕೀಡಾದ ತಕ್ಷಣ ಸ್ಥಳಕ್ಕೆ ಸ್ಥಳೀಯರು ಧಾವಿಸಿದ್ದಾರೆ. ಅವಘಡದ ಬಳಿಕ ಕಾಪ್ಟರ್ ಬೆಂಕಿ ಹೊತ್ತಿ ಉರಿಯತೊಡಗಿದ್ದು ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಯಿತು. ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ ಮೇರೆಗೆ ಅವರುಗಳು ಕೂಡ ಸ್ಥಳೀಯರ ಸಹಾಯದಿಂದ ಹೆಲಿಕಾಪ್ಟರ್ ಅವಶೇಷಗಳ ಮಧ್ಯೆ ಸಿಲುಕಿದ್ದ ಸುಟ್ಟು ಕರಕಲಾಗಿದ್ದ ದೇಹಗಳನ್ನು ಹೊರತೆಗೆದರು. ಇದರಲ್ಲಿ ೩ ಮಂದಿಯಷ್ಟೇ ಜೀವಂತವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿತ್ತು. ಸುಟ್ಟ ಗಾಯಗಳಿಂದಾಗಿ ಇಬ್ಬರು ಮೃತಪಟ್ಟಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ೧೪ ಮಂದಿಯ ಪೈಕಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಎಸ್.ಸಿ ಅವರು ಮಾತ್ರ ಜೀವಂತವಾಗಿದ್ದು, ವೆಲ್ಲಿಂಗ್‌ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡಾವಣೆ ಸಂದರ್ಭ ಮಂಜಿನ ವಾತಾವರಣ ಇದ್ದ ಕಾರಣ ಅವಘಡ ಸಂಭವಿಸಿರಬಹುದು ಎನ್ನಲಾಗಿದೆಯಾದರೂ, ತನಿಖೆ ಬಳಿಕವಷ್ಟೆ ಅಪಘಾತಕ್ಕೆ ನಿಕರ ಕಾರಣ ತಿಳಿಯಲಿದೆ.
ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಹೆಲಿಕಾಪ್ಟರ್‌ನ ಪೈಲೆಟ್ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾನ್, ಬ್ರಿಗೇಡಿಯರ್ ಎಲ್.ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್
ಬಿ.ಸಾಯಿ ತೇಜಾ, ಹವಾಲ್ದಾರ್ ಸತ್ಪಾಲ್ ಸೇರಿದಂತೆ ಒಟ್ಟು ೧೩ ಮಂದಿ ಮೃತಪಟ್ಟಿದ್ದಾರೆ. ರಾವತ್ ದಂಪತಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ರಾವತ್ ಅವರ ಅಂತಿಮ ಸಂಸ್ಕಾರ
(ಮೊದಲ ಪುಟದಿಂದ) ತಾ.೯ ರಂದು (ಇಂದು) ನವದೆಹಲಿಯಲ್ಲಿ ನಡೆಯಲಿದೆ.
ಏರ್ ಚೀಫ್ ಮಾರ್ಷಲ್ ವಿ.ಆರ್ ಚೌದ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸಂಬAಧ ಪ್ರಧಾನಮಂತ್ರಿ ಮುಂದಾಳತ್ವದ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯೂರಿಟಿ (ಅಅS) ಸಭೆಯು ಇಂದು ಸಂಜೆ ೬:೩೦ಕ್ಕೆ ನಡೆದಿದ್ದು, ರಕ್ಷಣಾ ಮಂತ್ರಿ ರಾಜ್‌ನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಂಡಿದ್ದರು.
ಅಆS
೨೪ ಡಿಸೆಂಬರ್ ೨೦೧೯ ರಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಎಂಬ ಸೇನಾ ಹುದ್ದೆಯನ್ನು ರಚಿಸಲಾಗಿದ್ದು, ಜನರಲ್ ಬಿಪಿನ್ ರಾವತ್ ಅವರನ್ನು ಇದಕ್ಕೆ ನೇಮಕ ಮಾಡಲಾಯಿತು. ಭಾರತೀಯ ಸೇನೆಯಲ್ಲಿ ಅತ್ಯಂತ ಪ್ರಮುಖ ಸ್ಥಾನವಾಗಿರುವ ಸಿ.ಡಿ.ಎಸ್ ಜವಾಬ್ದಾರಿಯಿಂದ ಕೆಲವೇ ತಿಂಗಳಿನಲ್ಲಿ ರಾವತ್ ಅವರು ನಿವೃತ್ತಿ ಪಡೆಯಲಿದ್ದರು.