ಮಡಿಕೇರಿ, ಡಿ. ೯: ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟ ಭಾರತೀಯ ರಕ್ಷಣಾ ಪಡೆಯ ಮೊದಲ ಸಿಡಿಎಸ್ ಜನರಲ್ ಬಿಪಿನ್ ಲಕ್ಷö್ಮಣ್ ಸಿಂಗ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ ೧೩ ಯೋಧರಿಗೆ ಜಿಲ್ಲೆಯ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುಷ್ಪ ಹಾಗೂ ನುಡಿ ನಮನದ ಮೂಲಕ ಅಗಲಿದ ಯೋಧರನ್ನು ಸ್ಮರಿಸಲಾಯಿತು.ಮಡಿಕೇರಿ: ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ ಹೊಂದಿದ ಭಾರತೀಯ ರಕ್ಷಣಾ ಪಡೆಯ ಮೊದಲ ಸಿಡಿಎಸ್ ಜನರಲ್ ಬಿಪಿನ್ ಲಕ್ಷö್ಮಣ್ ಸಿಂಗ್ ರಾವತ್ ಹಾಗೂ ಅವರ ಪತ್ನಿ ಮತ್ತು ಇತರ ಸೇನಾಧಿಕಾರಿಗಳ ಆತ್ಮಕ್ಕೆ ಶಾಂತಿ ಕೋರಿ ಮಡಿಕೇರಿ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಲ್ಲಿನ ಜ.ತಿಮ್ಮಯ್ಯ ವೃತ್ತದಲ್ಲಿ ಮೃತರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಕುಟ್ಟಪ್ಪ, ಉಪಾಧ್ಯಕ್ಷ ಟಿ.ಸಿ. ಗಣಪತಿ, ಕಾರ್ಯದರ್ಶಿ ಎಂ.ಎ. ಕಾವೇರಪ್ಪ, ಆಡಳಿತ ಮಂಡಳಿಯ ನಾಚಪ್ಪ, ಮುತ್ತಣ್ಣ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ಸ್ಮರಣೆ
ಮಡಿಕೇರಿ : ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಯುದ್ಧ ಸ್ಮಾರಕದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಹಾಗೂ ಹಿಂದೂಜಾಗರಣ ವೇದಿಕೆಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೃತ ಯೋಧರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದು, ಮೌನಾಚರಣೆ ಮಾಡಲಾಯಿತು.
ಈ ಸಂದರ್ಭ ನಿವೃತ್ತ ಸೇನಾಧಿಕಾರಿ ಮೇಜರ್ ಬಿದ್ದಂಡ ನಂಜಪ್ಪ ಮಾತನಾಡಿ, ಬಿಪಿನ್ ರಾವತ್ ಅತ್ಯಂತ ಚಾಣಾಕ್ಷö್ಯ ಹಾಗೂ ಧೈರ್ಯವಂತ ಅಧಿಕಾರಿಯಾಗಿದ್ದರು.
ಈ ದುರಂತದ ಕುರಿತು ನಮ್ಮೆಲ್ಲರ ಹೃದಯದಲ್ಲಿ ಕೆಲವು ಅನುಮಾನಗಳು ಉದ್ಭವವಾಗಿವೆ. ಅದು ಸುಳ್ಳಾಗಲಿ ಎಂದು ಹೇಳಿದರು.
ಈ ಆಘಾತದಿಂದ ದೇಶದ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದ ಅವರು, ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂ, ಕುಶಾಲನಗರದ ಸೈನಿಕ ಶಾಲೆಗೆ ಬಿಪಿನ್ ರಾವತ್ರ ಕೊಡುಗೆಯನ್ನು ಸ್ಮರಿಸಿಕೊಂಡರು.
ಮಡಿಕೇರಿಯAತೆ, ಗೋಣಿಕೊಪ್ಪದಲ್ಲಿ ವೀರ ಸೇನಾನಿಗಳ ಮ್ಯೂಸಿಯಂ ನಿರ್ಮಾಣ ಮಾಡುವಂತೆ ಕೋರಿದ್ದೆವು. ಅವರು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು ಎಂದರು.
ಹಿAದೂ ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಡಗದಾಳು ಮಹೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸುಬೇದಾರ್ ಮಾದಪ್ಪ, ಮೇಜರ್ ತಿಮ್ಮಯ್ಯ, ನಿವೃತ್ತ ಯೋಧರು, ಜಾಗರಣ ವೇದಿಕೆಯ ಕಾರ್ಯಕರ್ತರು ಇದ್ದರು.
ಜಿಲ್ಲಾ ಕಾಂಗ್ರೆಸ್ನಿAದ
ಮಡಿಕೇರಿ: ಭಾರತೀಯ ಸೇನೆಯ ಪರಮೋಚ್ಚ ಅಧಿಕಾರಿ ಸಿಡಿಎಸ್ ಬಿಪಿನ್ ರಾವತ್ ರವರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಮತ್ತು ಮಡಿಕೇರಿ ನಗರ ಕಾಂಗ್ರೆಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಲ್ಲಿಸಲಾಯಿತು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನೀರಾ ಮೈನಾ ಮಾತನಾಡಿ, ಭಾರತಾಂಬೆಯ ಸುಪುತ್ರ, ಅಪ್ರತಿಮ ಯೋಧ ಬಿಪಿನ್ ರಾವತ್ ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದರು. ಅವರ ೪೦ ವರ್ಷಗಳ ಸೇನೆಯಲ್ಲಿ ನಿಸ್ವಾರ್ಥ ಸೇವೆ ಎಲ್ಲಾ ಭಾರತೀಯರಿಗೆ ಆದರ್ಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಮೂಡ ಅಧ್ಯಕ್ಷ ಚುಮ್ಮಿದೇವಯ್ಯ ಮಾತನಾಡಿ, ಭಾರತೀಯ ಸೇನೆ ಬಿಪಿನ್ ರಾವತ್ ರವರ ಅಗಲಿಕೆಯಿಂದ ಅಪಾರ ನಷ್ಟ ಅನುಭವಿಸಿದ್ದು ಅವರ ಸೇವೆ ಚಿರಸ್ಥಾಯಿಯಾಗಿ ಉಳಿದಿದೆ ಎಂದರು.
ಅಧ್ಯಕ್ಷತೆ ವಹಿಸಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿದರು. ಆರಂಭದಲ್ಲಿ ಬಿಪಿನ್ ರಾವತ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಿಪಿನ್ ರಾವತ್ ಅಮರ್ ರಹೇ ಘೋಷಣೆ ಕೂಗಲಾಯಿತು.
ಬಿಪಿನ್ ರಾವತ್ ಅವರ ಪತ್ನಿ ಮತ್ತು ಇತರ ಮೃತ ಸೇನಾ ಸಿಬ್ಬಂದಿಗಳ ಆತ್ಮಕ್ಕೆ ಶಾಂತಿ ಕೋರಿ ಸಭೆ ಒಂದು ನಿಮಿಷದ ಮೌನಾಚರಣೆ ಸಲ್ಲಿಸಿತು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ,ಮಾಜಿ ಮೂಡಾ ಅಧ್ಯಕ್ಷ ಮುನೀರ್ ಅಹಮದ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಸೈನಿಕ ಘಟಕದ ಜಿಲ್ಲಾಧ್ಯಕ್ಷ ಬೊಳ್ಳಿಯಂಡ ಗಣೇಶ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಖಲೀಲ್ ಬಾಷ, ನಗರ ಕಾಂಗ್ರೆಸ್ ಮಹಿಳಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಮುಖಂಡರಾದ ಅಂಬೇಕಲ್ ನವೀನ್, ಕಾನೆಹಿತ್ಲು ಮೊಣ್ಣಪ್ಪ, ಯಾಕೂಬ್, ಜಿ.ಸಿ. ಜಗದೀಶ್, ಕೊಕ್ಕಂಡ ಚಂಗಪ್ಪ, ಸೌಕತ್ ಆಲಿ, ಬೊಳ್ಳಂಡ ನಾಚಪ್ಪ, ಸೌಕತ್ ಆಲಿ, ಎಂ.ಎA. ಹನೀಫ್, ಎ.ಜಿ. ರಮೇಶ್, ರಾಣಿ, ಉಷಾ ಸೇರಿದಂತೆ ಇತರರು ಭಾಗವಹಿಸಿದ್ದರು.
ವೀರಾಜಪೇಟೆಯಲ್ಲಿ ಸಂತಾಪ
ವೀರಾಜಪೇಟೆ: ತಮಿಳುನಾಡಿನ ಕೊಯಮತ್ತೂರು ಸಮೀಪದ ಊಟಿಯ ಬಳಿ ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್(ಪಿವಿಎಎಸ್ಎಂ, ಯುವೈಎಸ್ಎಂ, ಎವಿಎಸ್ಎಂ, ವೈಎಸ್ಎಂ, ಎಸ್ಎಂ, ವಿಎಸ್ಎಂ, ಎಡಿಸಿ) ಹಾಗೂ ಅವರೊಂದಿಗೆ ಇದ್ದ ಉಳಿದ ಸೇನಾನಿಗಳು ಹೆಲಿಕಾಪ್ಟ್ಟರ್ ಪತನಗೊಂಡು ಮೃತಪಟ್ಟ ಪಟ್ಟಣದ ಯೋಧರ ಸ್ತಂಭದ ಬಳಿ ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಸಂತಾಪ ವ್ಯಕ್ತಪಡಿಸಿ, ಯೋಧರ ಸ್ತಂಭಕ್ಕೆ ಪುಷ್ಪಗುಚ್ಚ ಇರಿಸಿ ನಮನ ಸಲ್ಲಿಸಲಾಯಿತು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ ಮಾತನಾಡಿದರು. ಇದೇ ಸಂದÀರ್ಭ ಉಪಾಧ್ಯಕ್ಷ ಚಪ್ಪಂಡ ಹರೀಶ್, ಮಾಜಿ ಅಧ್ಯಕ್ಷ ಕಾವಡಿಚಂಡ ಗಣಪತಿ, ನಿದೆೆÃðಶಕರುಗಳಾದ ಪಟ್ರಪಂಡ ಕರುಂಬಯ್ಯ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಗೋಣಿಕೊಪ್ಪಲು: ಭಾರತೀಯ ರಕ್ಷಣಾ ಪಡೆಯ ಮೊದಲ ಸಿ.ಡಿ.ಎಸ್. ಜನರಲ್ ಬಿಪಿನ್ ಲಕ್ಷö್ಮಣ್ ಸಿಂಗ್ ರಾವತ್ ದುರ್ಮಣಕ್ಕೀಡಾದ ಹಿನ್ನೆಲೆಯಲ್ಲಿ ದೇಶ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಸಮೀಪ ವಿರುವ ಮಹಾಸೇನಾನಿಗಳಾದ ಜ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ನವರ ಪ್ರತಿಮೆ ಬಳಿ ಜಮಾವಣೆಗೊಂಡ ನಾಡಿನ ವಿವಿಧ ಭಾಗದ ದೇಶ ಭಕ್ತರು ಬಿಪಿನ್ ರಾವತ್ ರವರಿಗೆ ನುಡಿ ನಮನ ಸಲ್ಲಿಸಿದರು.
ಸಂಘ ಪರಿವಾರ ಪ್ರಮುಖರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪ್ರಮುಖರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾವತ್ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಸಂಘ ಪರಿವಾರ ಜಿಲ್ಲಾ ಸರ ಸಂಚಾಲಕ ಚೆಕ್ಕೇರ ಮನು ಕಾವೇರಪ್ಪ ಮಾತನಾಡಿ, ದೇಶ ಕಂಡ ಮಹಾನ್ ನಾಯಕನನ್ನು ನಾವೆಲ್ಲರೂ ಇಂದು ಕಳೆದುಕೊಂಡಿದ್ದೇವೆ, ದೇಶದ ರಕ್ಷಣೆಗೆ ಇವರು ತೆಗೆದುಕೊಂಡ ಕ್ರಮಗಳು ಶ್ಲಾಘನೀಯ, ಮೂರು ಸೇನೆಯನ್ನು ಒಂದೇ ದಾರಿಯಲ್ಲಿ ಸಾಗುವ ರೀತಿಯಲ್ಲಿ ಇವರು ತೆಗೆದುಕೊಂಡ ಕ್ರಮಗಳೇ, ನಮ್ಮ ದೇಶದ ರಕ್ಷಣೆಗೆ ಪ್ರಮುಖ ಕಾರಣಗಳು ಎಂದರು.
ಜ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಸುಬ್ಬಯ್ಯ ಮಾತನಾಡಿ, ದೇಶದ ದಂಡನಾಯಕನಿಗೆ ಅಷ್ಟೊಂದು ಪ್ರಮಾಣದಲ್ಲಿ ಭದ್ರತೆ ಇದ್ದರೂ, ಅಪಘಾತ ಸಂಭವಿಸಿದೆ. ಈ ಬಗ್ಗೆ ದೇಶದ ಜನರಲ್ಲಿ ಅನುಮಾನವಿದೆ. ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಇವರ ಸಾವಿಗೆ ಸರಿಯಾದ ಕಾರಣವನ್ನು ಜನರಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಮೇಜರ್ ನಂದಾ ಮಾತನಾಡಿ ರಾವತ್ ರವರಿಗೆ ಕೊಡಗಿನ ಮೇಲೆ ಅಪಾರವಾದ ಪ್ರೀತಿ ಇತ್ತು. ಈ ಪ್ರೀತಿಯಿಂದ ಕೊಡಗು ಜಿಲ್ಲೆಗೆ ನಾಲ್ಕು ಭಾರಿ ಭೇಟಿ ನೀಡಿದ್ದಾರೆ. ಯುವ ಸಮುದಾಯ ಇವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸೇನೆಗೆ ಸೇರುವ ಕೆಲಸವಾಗಬೇಕು ಎಂದರು.
ಕಾವೇರಿ ಕಾಲೇಜು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕುಟ್ಟಂಡ ವಿಜು, ಸಂಘ ಪರಿವಾರದ ನಿಕಟಪೂರ್ವ ಸಂಚಾಲಕ ಮಚ್ಚರಂಡ ಮಣಿ ಕಾರ್ಯಪ್ಪ ಸೇರಿದಂತೆ ಹಲವಾರು ಪ್ರಮುಖರು ರಾವತ್ ರವರ ಗುಣಗಾನ ಮಾಡಿದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಫೋರಂನ ಉಪಾಧ್ಯಕ್ಷ ಮಾಚಿಮಾಡ ರವೀಂದ್ರ, ಕಬ್ಬಚ್ಚೀರ ಸುಬ್ರಮ್ಮಣಿ ಸೇರಿದಂತೆ ಸಂಘ ಪರಿವಾರದ ಪ್ರಮುಖರು, ವಿವಿಧ ಸಂಘ ಸಂಸ್ಥೆಯ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸೋಮವಾರಪೇಟೆಯಲ್ಲಿ ಶ್ರದ್ಧಾಂಜಲಿ
ಸೋಮವಾರಪೇಟೆ: ನಿನ್ನೆ ದಿನ ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ನಿಧನಕ್ಕೆ ಸೋಮವಾರಪೇಟೆಯಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾವತ್ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಪುಟ್ಟಪ್ಪ ವೃತ್ತದಲ್ಲಿ ಅಳವಡಿಸಿದ ರಾವತ್ ಅವರ ಭಾವಚಿತ್ರಕ್ಕೆ ಕಾರ್ಯ ಕರ್ತರು ಹಾಗೂ ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು.
ಹಿಂದೂ ಪರ ಸಂಘಟನೆಯ ತೋಳೂರು ರಜಿತ್ ಮತ್ತು ಸೋಮವಾರಪೇಟೆ ಜೈ ಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಅವರುಗಳು, ಬಿಪಿನ್ ರಾವತ್ ಅವರ ಸೇವೆಯನ್ನು ಸ್ಮರಿಸಿದರು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ, ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಎಂ.ಬಿ. ಉಮೇಶ್, ತಾಲೂಕು ಕಾರ್ಯದರ್ಶಿ ಬೋಜೇಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಕೆ. ಮಾದಪ್ಪ, ಕಾರ್ಯದರ್ಶಿ ರೂಪಾ ಸತೀಶ್, ಯುವಮೋರ್ಚಾ ರಾಜ್ಯ ಸಮಿತಿಯ ಮಹೇಶ್ ತಿಮ್ಮಯ್ಯ, ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್ ಸೇರಿದಂತೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ರೈತ ಸಂಘದಿAದ
ಗೋಣಿಕೊಪ್ಪಲು: ಭಾರತೀಯ ಸೇನೆಯ ದಂಡನಾಯಕ ಸೇರಿ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ಯೋಧರಿಗೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಗೋಣಿಕೊಪ್ಪಲುವಿನ ರೈತ ಸಂಘದ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪ್ರ. ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಬಿಪಿನ್ ರಾವತ್ರಂತಹ ಮಹಾನ್ ನಾಯಕನನ್ನು ಕಳೆದು ಕೊಂಡಿರುವುದು ಊಹಿಸಲು ಸಾಧ್ಯವಾಗುತ್ತಿಲ್ಲ. ಇವರ ಅವಧಿಯಲ್ಲಿ ದೇಶದ ಸೇನೆ ಉತ್ತಮ ಮಟ್ಟದತ್ತ ಸಾಗಿದೆ. ಇವರ ಸಾವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ ಮಾಚಯ್ಯ, ವಿವಿಧ ಗ್ರಾಮದ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಪುಚ್ಚಿಮಾಡ ರಾಯ್ ಮಾದಪ್ಪ, ತೀತರಮಾಡ ರಾಜ, ಎಸ್.ಎಸ್. ಸುರೇಶ್, ಪುಚ್ಚಿಮಾಡ ಸುನೀಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸುಂಟಿಕೊಪ್ಪದಲ್ಲಿ
ಸುAಟಿಕೊಪ್ಪ: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ೧೨ ಮಂದಿ ಸೇನಾಧಿಕಾರಿಗಳ ಗೌರವಾರ್ಥ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಗುರುವಾರ ಸಂಜೆ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಶ್ರದ್ಧಾಂಜಲಿ ನಡೆಸಿ ಸಂತಾಪ ಸೂಚಿಸಿದರು.
ಸುಂಟಿಕೊಪ್ಪ ಗ್ರಾ.ಪಂ. ಪಿಡಿಒ ವೇಣುಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಫ್. ಸಭಾಸ್ಟೀನ್, ಹಿಂದುಳಿದ ವರ್ಗಗಳ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಮೋಹನ್ ಮಾತನಾಡಿದರು.
ಮೊದಲಿಗೆ ಮೃತಪಟ್ಟ ಸೇನಾ ದಂಡನಾಯಕರು ಸೇರಿದಂತೆ ೧೩ ಮಂದಿಯ ಆತ್ಮಕ್ಕೆ ಶಾಂತಿ ಕೋರಿ ಹಣತೆ ಹಚ್ಚಿ, ಪುಷ್ಪ ನಮನವನ್ನು ಸಲ್ಲಿಸಿ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸುಂಟಿಕೊಪ್ಪ ಪಿಎಸ್ಐ ಪುನಿತ್, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಬಿ.ಕೆ. ಪ್ರಶಾಂತ್, ವಾಸುದೇವ್, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಆರ್. ಸುನಿಲ್ ಕುಮಾರ್, ರಫೀಕ್ ಖಾನ್, ನಮ್ಮ ಸುಂಟಿಕೊಪ್ಪ ಬಳಗದ ಕೆ.ಎಸ್. ಅನಿಲ್ ಕುಮಾರ್, ಕರವೇ ಅಶೋಕ್, ಸಿ.ಸಿ. ಸುನಿಲ್ ಸೇರಿದಂತೆ ಇತರರು ಇದ್ದರು.
ಬೇತು ಗ್ರಾಮದಲ್ಲಿನಾಪೋಕ್ಲು: ಹೆಲಿಕಾಪ್ಟರ್ ದುರಂತದಲ್ಲಿ ಮರಣಪಟ್ಟ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಇತರ ಸೇನಾಧಿಕಾರಿಗಳ ಆತ್ಮಕ್ಕೆ ಶಾಂತಿ ಕೋರಿ ಬೇತು ಗ್ರಾಮದಲ್ಲಿ ಮಾಜಿ ಸೈನಿಕರು, ಮಕ್ಕಿ ಶ್ರೀ ಶಾಸ್ತಾವು ಯುವಕ ಸಂಘ, ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ಮೌನಾಚರಿಸಿ ಸಂತಾಪ ಸೂಚಿಸಿದರು.
ಕೂಡಿಗೆಕೂಡಿಗೆ: ಹೆಲಿಕಾಪ್ಟರ್ ಪತನದಿಂದ ದುರ್ಮರಣ ಹೊಂದಿದ ಸೇನಾಧಿಕಾರಿಗಳಿಗೆ ಕೂಡಿಗೆಯಲ್ಲಿ ವಿವಿಧ ಸಂಘಟನೆಯ ಪ್ರಮುಖರು ಡೈರಿ ಸರ್ಕಲ್ನಲ್ಲಿ ಬಿಪಿನ್ ರಾವತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.
ಕೊಡ್ಲಿಪೇಟೆಯಲ್ಲಿ
ಕೊಡ್ಲಿಪೇಟೆ: ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಕೊಡ್ಲಿಪೇಟೆ ಪಟ್ಟಣದಲ್ಲಿ ಸಂಘಸAಸ್ಥೆಗಳ ಪ್ರಮುಖರು, ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಿದರು.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಪಿನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು.
ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಪ್ರಮುಖರಾದ ಡಿ. ಭಗವಾನ್, ಕೊಡ್ಲಿಪೇಟೆ: ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಕೊಡ್ಲಿಪೇಟೆ ಪಟ್ಟಣದಲ್ಲಿ ಸಂಘಸAಸ್ಥೆಗಳ ಪ್ರಮುಖರು, ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಿದರು.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಪಿನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು.
ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಪ್ರಮುಖರಾದ ಡಿ. ಭಗವಾನ್,