ನವದೆಹಲಿ, ಡಿ. ೯ : ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನದಿಂದಾಗಿ ದುರ್ಮರಣಕ್ಕೀಡಾದ ಸಿ.ಡಿ.ಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಇನ್ನು ೧೧ ಮಂದಿಯ ಅಂತ್ಯಕ್ರಿಯೆ ಸೇನಾ ಗೌರವದೊಂದಿಗೆ ತಾ.೧೦ ರಂದು (ಇಂದು) ನಡೆಯಲಿದೆ ಎಂದು ಕೇಂದ್ರ ರಕ್ಷಣಾ ಮಂತ್ರಿ ರಾಜ್ನಾಥ್ ಸಿಂಗ್ ಸಂಸತ್ನಲ್ಲಿ ಮಾಹಿತಿ ನೀಡಿದರು.
ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಹೆಲಿಕಾಪ್ಟರ್ ಪತನಕ್ಕೆ ಸಂಬAಧಿಸಿದAತೆ ನಡೆಸಲಾಗುತ್ತಿರುವ ತನಿಖೆಯ ತನಿಖಾ ತಂಡವನ್ನು ಮುನ್ನಡೆಸಲಿದ್ದಾರೆ. ಹೆಲಿಕಾಪ್ಟರ್ ಪತನವಾದ ಸ್ಥಳದಿಂದ ‘ಬ್ಲಾಕ್ ಬಾಕ್ಸ್’ ಅನ್ನು ಪಡೆದಿರುವ ತನಿಖಾ ತಂಡ ತನಿಖೆ ನಡೆಸಲಿದ್ದು, ಅವಘಡಕ್ಕೆ ನಿಖರ ಕಾರಣ ಪತ್ತೆಹಚ್ಚಲಿದ್ದಾರೆ ಎಂದು ರಾಜ್ನಾಥ್ ಸಿಂಗ್ ಅವರು ಸಂಸತ್ನಲ್ಲಿ ಮಾಹಿತಿ ನೀಡಿದರು.
ನವದೆಹಲಿಯ ಬ್ರಾರ್ ಸ್ಕೆ÷್ವÃರ್ ಸಿಮೆಟರಿಯಲ್ಲಿ ೧೩ ಮಂದಿಯ ಅಂತ್ಯಕ್ರಿಯೆ ನಡೆಯಲಿದೆ. ರಾಷ್ಟçಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಮಂತ್ರಿ ರಾಜ್ನಾಥ್ ಸಿಂಗ್ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಭಾರತದ ನೆರೆಯ ರಾಷ್ಟçಗಳಾದ ಶ್ರೀಲಂಕಾ, ನೇಪಾಳ ಹಾಗೂ ಭೂತಾನ್ನ ಉನ್ನತ ರಕ್ಷಣಾ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ.
ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿದಂತೆ ರಾವತ್ನ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡರ್, ಸ್ಟಾಫ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಪೈಲಟ್ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾನ್, ಸ್ಕ್ವಾಡ್ರನ್ ಲೀಡರ್ ಕುಲ್ದೀಪ್ ಸಿಂಗ್, ಜೂನಿಯರ್ ವಾರೆಂಟ್ ಅಧಿಕಾರಿ ರಾಣ ಪ್ರತಾಪ್ ದಾಸ್ ಹಾಗೂ ಅರಕ್ಕಲ್ ಪ್ರದೀಪ್, ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಹಾಗೂ ಲ್ಯಾನ್ಸ್ ನಾಯಕ್ ಬಿ ಸಾಯ್ ತೇಜಾ ಅವರುಗಳ ಪಾರ್ಥಿವ ಶರೀರಗಳನ್ನು ತಮಿಳುನಾಡಿನ ವೆಲ್ಲಿಂಗ್ಟನ್ನಿAದ ಸೂಲೂರ್ ಏರ್ಬೇಸ್ಗೆ ತರಲಾಯಿತು. ಇಲ್ಲಿಂದ ವಾಯುಪಡೆಯ ವಿಮಾನದೊಂದಿಗೆ ನವದೆಹಲಿಯ ಪಾಲಮ್ ಏರ್ಬೇಸ್ಗೆ ತಾ.೯ ರ ಸಂಜೆ ಸುಮಾರು ೭:೪೫ ಗಂಟೆಗೆ ಸಾಗಿಸಲಾಯಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಚೀಫ್ ಆಫ್ ದಿ ಏರ್ ಸ್ಟಾಫ್ (ವಾಯುಪಡೆಯ ಮುಖ್ಯಸ್ಥ) ವಿವೇಕ್ ರಾಮ್ ಚೌದ್ರಿ , ಚೀಫ್ ಆಫ್ ದಿ ನೇವಿ ಸ್ಟಾಫ್ (ನೌಕಾಪಡೆಯ ಮುಖ್ಯಸ್ಥ) ಅಡ್ಮಿರಲ್ ಆರ್ ಹರಿಕುಮಾರ್, ಚೀಫ್ ಆಫ್ ದಿ ಆರ್ಮಿ ಸ್ಟಾಫ್ (ಭೂಸೇನೆ ಮುಖ್ಯಸ್ಥ) ಜನರಲ್ ಮನೋಜ್ ಮುಕುಂದ್ ಸೇರಿದಂತೆ ಇತರ ಗಣ್ಯರು ಹಾಗೂ ಅಗಲಿದ ಯೋಧರ ಕುಟುಂಬದವರು ಪಾಲಮ್ ಏರ್ ಬೇಸ್ನಲ್ಲಿ ಅಗಲಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಅಗಲಿದ ಯೋಧರಿಗೆ, ತಮಿಳುನಾಡಿನ ಮುಖ್ಯಮಂತ್ರಿ ಎಮ್.ಕೆ ಸ್ಟಾಲಿನ್, ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌದ್ರಿ ಅವರು ವೆಲ್ಲಿಂಗ್ಟನ್ನ ಮದ್ರಾಸ್ ರೆಜಿಮೆಂಟಲ್ ಸೆಂಟರ್ನಲ್ಲಿ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು.
ಅವಘಡದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಬದುಕಿಸುವ ಎಲ್ಲ ಪ್ರಯತ್ನಗಳು ಆಗುತ್ತಿದೆ ಎಂದು ರಾಜನಾಥ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.