ನಾಪೆೆÇÃಕ್ಲು, ಡಿ. ೭: ಹೊದ್ದೂರಿನಿಂದ - ಮೂರ್ನಾಡಿಗೆ ಹೋಗುವ ಮುಖ್ಯ ರಸ್ತೆಯು ಕಳೆದ ೧೦ ವರ್ಷಗಳಿಂದ ಡಾಂಬರು ಕಾಣದೆ ಗುಂಡಿಮಯವಾಗಿದ್ದು, ಈ ರಸ್ತೆಯನ್ನು ೧೦ ದಿನದ ಒಳಗೆ ದುರಸ್ತಿ ಪಡಿಸದಿದ್ದಲ್ಲಿ ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕ ಬೆಂಬಲದೊAದಿಗೆ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಎಚ್ಚರಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿಗೆ ಮಂಗಳವಾರ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸತೀಶ್ ಭೇಟಿ ನೀಡಿದ ಸಂದರ್ಭ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಸಂದರ್ಭ ಕುಸುಮಾವತಿ ಮಾತನಾಡಿ, ರಸ್ತೆ ಅಭಿವೃದ್ಧಿಗಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾ. ೧೦ ರಂದು ಈ ಬಗ್ಗೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ರಸ್ತೆ ತಡೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಗ್ರಾಮ ಪಂಚಾಯತ್ ಸದಸ್ಯ ಮೊಣ್ಣಪ್ಪ ಮಾತನಾಡಿ, ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಮುಂದಿನ ವಿಧಾನ ಪರಿಷತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದ ಅವರು, ೧೦ ದಿನದ ಒಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ಲೋಕೋಪಯೋಗಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಹಮೀದ್, ಕೋರನ ರವಿ (ರಘು), ವಾಂಚೀರ ಜಗದೀಶ್, ಚೌರೀರ ಸೋಮಣ್ಣ, ಕೂಡಂಡ ರವಿ, ಕೂಡಂಡ ಪೃಥ್ವಿ, ಚೆಟ್ಟಿಮÁಡ ಲೋಕೇಶ್, ಮೇಕಂಡ ಗಣೇಶ್, ಸುನಿಲ್, ಚೌರೀರ ಅಪ್ಪಣ್ಣ, ಸಿ.ಯು. ಸೋಮಣ್ಣ, ಚೌರೀರ ನಿರನ್ ಮಂದಣ್ಣ, ಮಣಿ ಟಿ.ಆರ್. ಇನ್ನಿತರರು ಇದ್ದರು.
- ದುಗ್ಗಳ