ಮಡಿಕೇರಿ, ಡಿ. ೭: ಕೊಡಗು ಜಿಲ್ಲಾ ವಾಣಿಕಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆಯು ಇಂದು ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘವು ದಿನಾಂಕ ೨೨.೧೨.೨೦೦೨ ರಂದು ಪ್ರಾರಂಭಗೊAಡು ಸುಮಾರು ೨೧ ವರ್ಷದಿಂದ ತನ್ನ ಸ್ವಂತ ಬಂಡವಾಳದಿAದ ವ್ಯವಹಾರ ನಡೆಸುತ್ತಾ ಬಂದಿದೆ. ತಾ. ೩೧ಕ್ಕೆ ಸಂಘದಲ್ಲಿ ಒಟ್ಟು ೧೮೬೫ ಜನ ಸದಸ್ಯರಿರುತ್ತಾರೆ. ಸದಸ್ಯರಿಂದ ಒಟ್ಟು ರೂ. ೬೯,೫೧,೫೦೦ ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಸಂಘದಲ್ಲಿ ಅಡಮಾನ ಸಾಲ, ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್ಡ್ರಾಫ್ಟ್ ಸಾಲ ಮತ್ತು ಸಿಬ್ಬಂದಿಗಳಿಗೆ ಆಸಾಮಿ ಸಾಲ ನೀಡಲಾಗುತ್ತಿದೆ. ಮಾರ್ಚ್ ೩೧ ಅಂತ್ಯಕ್ಕೆ ವಿವಿಧ ಠೇವಣಾತಿಗಳಿಂದ ರೂ. ೨೨,೮೩,೫೮,೮೦೭ ಠೇವಣಾತಿ ಸಂಗ್ರಹಿಸಲಾಗಿದೆ.
ರೂ. ೫,೬೭,೨೯,೧೦೦ ವಿವಿಧ ಸಾಲ ನೀಡಲಾಗಿದೆ. ಅಲ್ಲದೆ, ಸಂಘವು ೨೦೦೬-೦೭ನೇ ಸಾಲಿನಿಂದ ಲಾಭದಲ್ಲಿ ನಡೆಯುತ್ತಿದೆ. ಪ್ರಸ್ತುತ ವರ್ಷ ಮಾರ್ಚ್ ಅಂತ್ಯಕ್ಕೆ ಸಂಘವು ೪,೦೬,೪೫೯ ಲಾಭ ಗಳಿಸಿರುತ್ತದೆ. ೨೦೧೮ರ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾದ ತೊಂದರೆ ಹಾಗೂ ಈ ವರ್ಷದ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸಾಲ ವಸೂಲಾತಿಯಲ್ಲಿ ಹಿನ್ನಡೆ ಉಂಟಾಗಿರುವುದರಿAದ ಲಾಭ ಕಡಿಮೆ ಆಗಿರುತ್ತದೆ ಎಂದರು.
೨೦೧೪-೧೫ನೇ ಸಾಲಿನಲ್ಲಿ ಇಲಾಖಾ ಅನುಮತಿ ಪಡೆದು ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿ ಸಂಘಕ್ಕೆ ಸಂಘದ ಸ್ವಂತ ಕಟ್ಟಡವನ್ನು ಖರೀದಿಸಲಾಗಿದೆ ಹಾಗೂ ೨೦೧೬-೧೭ನೇ ಸಾಲಿನಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು ಇವರ ಅನುಮತಿ ಪಡೆದು ಸಂಘದ ಸದಸ್ಯರ ಸಹಕಾರದೊಂದಿಗೆ ಈ ಹಿಂದೆ ಇದ್ದ ಕಟ್ಟಡದ ಮೇಲೆ ಇನ್ನೊಂದು ಅಂತಸ್ತನ್ನು ನಿರ್ಮಾಣ ಮಾಡಲಾಗಿದೆ.
ಸಂಘದಲ್ಲಿ ಒಟ್ಟು ೨೨ ಜನ ಪಿಗ್ಮಿ ಸಂಗ್ರಹಗಾರರು ಜಿಲ್ಲೆಯ ಹಲವು ಕಡೆಗಳಲ್ಲಿ ದಿನನಿತ್ಯ ಪಿಗ್ಮಿ ಠೇವಣಿ ಸಂಗ್ರಹಿಸುತ್ತಿದ್ದಾರೆ. ಸಂಘದಲ್ಲಿ ನಿರಖು ಠೇವಣಿಗಳಿಗೆ ಇತರ ಎಲ್ಲಾ ಬ್ಯಾಂಕ್ ಗಳಿಗಿಂತಲೂ ಹೆಚ್ಚಿಗೆ ಬಡ್ಡಿ ದರವನ್ನು ನೀಡಲಾಗುತ್ತಿದೆ. ಆದುದರಿಂದ ಎಲ್ಲಾ ವಾಣಿಜ್ಯೋದ್ಯಮಿಗಳು ತಮ್ಮ ಎಲ್ಲಾ ದಿನನಿತ್ಯದ ವ್ಯವಹಾರವನ್ನು ಸಂಘದ ಮುಖಾಂತರವೇ ವ್ಯವಹರಿಸಲು ಕೋರುತ್ತಾ ಸಂಘದ ಪ್ರಗತಿಗೆ ಸಹಕರಿಸುವಂತೆ ಕೋರಿದರು.
ಸಭೆಯಲ್ಲಿ ಉಪಾಧ್ಯಕ್ಷ ಬಿ. ರಾಮಕೃಷ್ಣಯ್ಯ, ನಿರ್ದೇಶಕರುಗಳಾದ ಕೆ.ಬಿ. ಗಿರೀಶ್ ಗಣಪತಿ, ಸವಿತ ರೈ, ಎಂ.ಪಿ. ಕಾವೇರಪ್ಪ, ಎಂ. ಬಿಜಾಯ್, ಅನಿಲ್ ಹೆಚ್.ಕೆ., ಮ್ಯಾಥ್ಯೂ ಕೆ.ಇ., ಎ.ಪಿ. ವೀರರಾಜು, ಬಿ. ಜನಾರ್ಧನ ಪ್ರಭು, ಬಿ. ಅಮೃತ್ರಾಜ್, ಜಯಂತಿ ಎಸ್.ಎಂ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ಟಿ.ಡಿ. ಉಪಸ್ಥಿತರಿದ್ದರು.