ಸಿದ್ದಾಪುರ, ಡಿ ೭ : ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘದ ಎರಡನೇ ವರ್ಷದ ಜನಪರ ಪ್ರೀಮಿಯರ್ ಲೀಗ್ ತಾ. ೧೧ ಹಾಗೂ ೧೨ ರಂದು ಮಾಲ್ದಾರೆ ಶಾಲಾ ಸಮೀಪದ ಮೈದಾನದಲ್ಲಿ ನಡೆಯಲಿದೆ ಎಂದು ಜನಪರ ಸಂಘದ ಅಧ್ಯಕ್ಷ ಆ್ಯಂಟೋನಿ ತಿಳಿಸಿದ್ದಾರೆ. ಮಾಲ್ದಾರೆಯಲ್ಲಿ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆಟಗಾರರ ಆಯ್ಕೆ ಮಾಡಲಾಗಿದ್ದು ಪ್ರತಿಷ್ಟಿತ ೮ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ. ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಜನಪರ ಸಂಘ ಕ್ರೀಡಾ, ಪರಿಸರ ರಕ್ಷಣೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಹೆಚ್ಚು ಒತ್ತು ನೀಡುತ್ತಿದ್ದು ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಸಾಧಕರು, ಸಮಾಜ ಸೇವಕರನ್ನು ಗೌರವಿಸಲಾಗುತ್ತಿದೆ ಎಂದರು.

ಬಿಡ್ಡಿAಗ್ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಪ್ರಮುಖರಾದ ಇಯಾ, ಶಿಹಾಬ್, ಜಾಫರ್, ಹಮೀದ್, ಅಜೀಜ್, ಅರ್ಷಾದ್, ಪ್ರವೀಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.