ಗೋಣಿಕೊಪ್ಪಲು, ಡಿ. ೮: ಇಲ್ಲಿಗೆ ಸಮೀಪ ಕೈಕೇರಿಯಲ್ಲಿ ಪಡಿಕಲ್ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಹುತ್ತರಿ ಊರೊರ್ಮೆ ನೆರವೇರಿತು. ಊರಿನ ಒಗ್ಗಟ್ಟಿಗಾಗಿ ವರ್ಷಕ್ಕೊಮ್ಮೆ ಹುತ್ತರಿ ಆಚರಣೆ ನಂತರ ಗ್ರಾಮಸ್ಥರು ಒಗ್ಗೂಡುವದು ಮತ್ತು ಸಾಮೂಹಿಕ ಭೋಜನದಲ್ಲಿ ಪಾಲ್ಗೊಳ್ಳುವದು ವಾಡಿಕೆ.
ಸಂಘದ ಕಾರ್ಯದರ್ಶಿ ಸಂತೋಷ್ ಪಿ.ಎಂ., ಉಪಾಧ್ಯಕ್ಷ ಎಂ.ಯು. ಈರಪ್ಪ, ಪಿ.ಪಿ. ಕಾರ್ಯಪ್ಪ(ಕಾಶಿ), ಟಿ.ಪಿ.ಮಾಚಯ್ಯ, ಟಿ.ಎಂ. ಕುಶಾಲಪ್ಪ, ಅನಂತ್ ಪಿ.ಎಂ., ಎಂ.ಇ. ಧರಣ, ನಿರಂಜನ್ ಪಿ.ಸಿ., ಜೆ.ಎ. ಬೋಜಪ್ಪ, ಮಣಿ ಪಿ.ಟಿ., ಪಡಿಕಲ್ ಯದು ಮುಂತಾದವರು ಹಾಜರಿದ್ದರು.