ವೀರಾಜಪೇಟೆ: ಡಾ. ಬಿ.ಆರ್. ಅಂಬೇಡ್ಕರ್ ಅವರು ದಲಿತರಿಗೆ ನೀಡಿರುವ ಕತ್ತಲಿಂದ ಬೆಳಕಿನೆಡೆಗೆ ಮಾರ್ಗವನ್ನು ಸಂವಿಧಾನದ ಮೂಲಕ ತೋರಿದ್ದಾರೆ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವಂತಾಗಬೇಕು ಎಂದು ದಲಿತ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್.ಶಿವಣ್ಣ ಹೇಳಿದರು.
ಸಂವಿಧಾನ ಶಿಲ್ಪಿ ಭಾರತ ರತ್ನ ಅಂಬೇಡ್ಕರ್ ಅವರ ೬೫ನೇ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ವೀರಾಜಪೇಟೆ ಬಳಿಯ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಣ್ಣ ಅವರು, ಬಡ ದಲಿತ ಕುಟುಂಬಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉನ್ನತ ಹುದ್ದೆಗೇರುವಂತಾಗಬೇಕು ಎಂದರು.
ದಲಿತ ಸಮಿತಿಯ ತಾಲೂಕು ಸಂಚಾಲಕ ಹೆಚ್.ಜಿ. ಲವ ಮಾತನಾಡಿದರು. ದಲಿತ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಹೆಚ್.ಜಿ. ಗೋಪಾಲ, ಆಂತರಿಕ ಶಿಸ್ತು ಹೆಚ್.ಕೆ. ವಿದ್ಯಾಧರ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ಜಾನಕಿ, ಸಮಿತಿಯ ಮಹಿಳಾ ಸಂಚಾಲಕಿ ರೇಖಾ, ಮೋಹನ್ ಅವರುಗಳು ಸಭೆಯಲ್ಲಿ ಮಾತನಾಡಿದರು.
ಬಳಿಕ ಐಮಂಗಲ ಗ್ರಾಮ ಸಮಿತಿಯನ್ನು ರಚಿಸಲಾಯಿತು. ಗ್ರಾಮ ಸಂಚಾಲಕರಾಗಿ ಹೆಚ್.ಡಿ. ಚಂಗಪ್ಪ, ತಾಲೂಕು ಆಂತರಿಕ ಶಿಸ್ತು ಸಮಿತಿ ಹೆಚ್.ಎಸ್. ತೇಜ, ಖಜಾಂಚಿಯಾಗಿ ಪುನಿತ್ ಅವರುಗಳು ಆಯ್ಕೆಗೊಂಡರು.ಸೋಮವಾರಪೇಟೆ: ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾ ವತಿಯಿಂದ ಅಂಬೇಡ್ಕರ್ ಪರಿನಿರ್ವಾಣ ದಿನದ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಎ. ಪ್ರತಾಪ್, ಮಂಡಲ ಅಧ್ಯಕ್ಷ ಹೆಚ್.ಸಿ. ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ದುಶ್ಯಂತ್ಕುಮಾರ್, ಪ್ರವೀಣ್, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯೆ ಮೋಹಿನಿ, ಕರ್ಕಳ್ಳಿ ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶನಿವಾರಸಂತೆ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ದ.ಸಂ.ಸ. ಒಕ್ಕೂಟ ಜಿಲ್ಲಾ ಮತ್ತು ಹೋಬಳಿ ಘಟಕ ಹಾಗೂ ಡಾ. ಅಂಬೇಡ್ಕರ್ ಭವನ ಮತ್ತು ಪುತ್ಥಳಿ ನಿರ್ಮಾಣ ಸಮಿತಿ ಸಹಭಾಗಿತ್ವದಲ್ಲಿ ನಡೆದ ಡಾ. ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.
ನಂತರ ನಡೆದ ಸಂವಿಧಾನ ಅರಿವಿನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿದ ದಲಿತ ಮುಖಂಡ ಹಾಡ್ನಳ್ಳಿ ಜಗದೀಶ್ ಮಾತನಾಡಿ, ಬಾಬಾ ಸಾಹೇಬ ಅಂಬೇಡ್ಕರ್ ಶೋಷಿತ ವರ್ಗದವರಲ್ಲಿ ಚೈತನ್ಯ ಮೂಡಿಸಿ, ಮೂಲ ಹಕ್ಕುಗಳನ್ನು ನೀಡುವ ಮೂಲಕ ಸರ್ವರಿಗೂ ಸಮಪಾಲು - ಸರ್ವರಿಗೂ ಸಮಬಾಳು ನೀಡಿರುವ ಉದಾತ್ತ ಚಿಂತನೆಯ ಸಂವಿಧಾನ ನೀಡಿದ್ದಾರೆ. ಹಾಗಾಗಿ ಅಂಬೇಡ್ಕರ್ ನಿತ್ಯ ವಂದನೀಯರು ಎಂದರು.
ವಿಘ್ನೇಶ್ವರ ವಿದ್ಯಾಸಂಸ್ಥೆ ಪಿಯು ಕಾಲೇಜಿನ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿದರು. ದ.ಸಂ.ಸ. ಒಕ್ಕೂಟ ಜಿಲ್ಲಾ ಘಟಕದ ಸಂಚಾಲಕ ಜೆ.ಆರ್. ಪಾಲಾಕ್ಷ ಮಾತನಾಡಿ, ದಲಿತರು ಸಂಘಟಿತರಾಗಬೇಕು. ಸಂವಿಧಾನ ಸಮಸ್ತ ಜನರ ಬದುಕಾಗಿದ್ದು, ಅದರ ಉಳಿವಿಗಾಗಿ ಸಂಘಟನೆ ಮುಖ್ಯವಾಗಿದೆ ಎಂದರು.
ದ.ಸA.ಸ. ಒಕ್ಕೂಟ ಹೋಬಳಿ ಅಧ್ಯಕ್ಷ ಶಿವಲಿಂಗ, ಮುಖಂಡರಾದ ಎಚ್.ಬಿ. ಜಯಮ್ಮ, ಸರೋಜಮ್ಮ, ಸರಸ್ವತಿ, ಎಸ್.ಜೆ. ರಾಜಪ್ಪ, ಕಾಂತರಾಜ್, ಕೆ.ಇ.ಬಿ. ಪ್ರದೀಪ್, ವೀರೇಂದ್ರ, ಸಣ್ಣಯ್ಯ, ಸಂದೀಪ್, ಹನುಮಯ್ಯ, ರಂಗಯ್ಯ, ಎಸ್.ಟಿ. ಮೋಹನ್, ಗುರು, ಮಂಜಯ್ಯ, ಲಿಂಗರಾಜ್, ಉಮೇಶ್, ಕೆ.ಟಿ.ಹರೀಶ್, ಮುಸ್ಲಿಂ ಸಮುದಾಯದ ಮುಖಂಡರಾದ ಅಬ್ಬಾಸ್, ಅಕ್ಮಲ್ ಇತರರು ಉಪಸ್ಥಿತರಿದ್ದರು.
ಸೋಮವಾರಪೇಟೆ: ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೫ನೇ ಪರಿನಿರ್ವಾಣ ಕಾರ್ಯಕ್ರಮ ಪತ್ರಿಕಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಕ್ಷದ ಜಿಲ್ಲಾಧ್ಯಕ್ಷ ಸಿದ್ದಪ್ಪ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ನೋವು, ಅವಮಾನಗಳನ್ನು ಅನುಭವಿಸಿದರೂ ಉನ್ನತ ಶಿಕ್ಷಣ ಪಡೆಯುವ ಮೂಲಕ ವಿಶ್ವಜ್ಞಾನಿಯಾಗಿದ್ದಾರೆ. ಈ ದೇಶದ ಜನರಿಗೆ ಮತದಾನದ ಹಕ್ಕು, ಸ್ವಾತಂತ್ರö್ಯದ ನಂತರ ಸಂವಿಧಾನ ರಚಿಸುವ ಜವಾಬ್ದಾರಿ ಹೊತ್ತುಕೊಂಡು ಎಲ್ಲಾ ಜನರಿಗೆ ಸ್ವಾತಂತ್ರö್ಯ, ಸಮಾನತೆ, ಸೋದರತೆ, ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳನ್ನು ದೊರಕಿಸಿಕೊಡುವ ಮೂಲಕ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಬಿ.ಸಿ.ರಾಜು, ಗೋವಿಂದರಾಜು, ಎಸ್.ಕೆ. ಅಮಿತ್, ಕೆ.ಕೆ. ಕಾಳಪ್ಪ, ಬಾಬು, ದಿನೇಶ್, ಹೆಚ್.ಈ. ಸಣ್ಣಪ್ಪ, ಜಯಪ್ಪ ಹಾನಗಲ್, ಹೆಚ್.ಪಿ. ಮಂಜುನಾಥ್, ನಾಗರಾಜ್, ಸುಶೀಲ ಹಾನಗಲ್ ಉಪಸ್ಥಿತರಿದ್ದರು.