ಸಿದ್ದಾಪುರ, ಡಿ. ೭: ಆಟವಾಡುತ್ತಿದ್ದ ಸಂದರ್ಭ ಮೂರು ವರ್ಷದ ಮಗು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹಾಲುಗುಂದದಲ್ಲಿ ನಡೆದಿದೆ.

ಅಸ್ಸಾಂ ಮೂಲದ, ಹಾಲುಗುಂದದಲ್ಲಿ ಕುಶ ಎಂಬವರ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಶಬೀರ್ ದಂಪತಿ ಪುತ್ರ ಮೊಹರ್ ಆಲಿ ಮೃತ ಮಗು.

ತೋಟದ ಮನೆಯ ಸಮೀಪ ಮಕ್ಕಳೊಂದಿಗೆ ಆಟವಾಡುವಾಗ ಮಗು ಆಕಸ್ಮಿಕವಾಗಿ ಕೆರೆಗೆ ಬಿದ್ದಿದೆ. ಬಳಿಕ ಸ್ಥಳೀಯರು ನೀರಿನಲ್ಲಿ ಮುಳುಗಿದ್ದ ಮಗುವನ್ನು ಹೊರ ತೆಗೆದಿದ್ದಾರೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.