ಶನಿವಾರಸಂತೆ, ಡಿ. ೭: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ಗ್ರಾಮದ ಕೂಲಿಕಾರ್ಮಿಕ ಗಣೇಶ್ (೩೪) ಎಂಬಾತ ತಾ. ೫ ರಂದು ಮನೆಯಲ್ಲಿದ್ದ ಕೀಟ ನಾಶಕ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದು ತಾ. ೫ ರಂದು ಮನೆಯಲ್ಲಿದ್ದ ಕೀಟ ನಾಶಕ ವಿಷ ಸೇವಿಸಿದ್ದಾರೆ. ನಂತರ ಇವರನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆ ಹಾಸನದ ಆಸ್ಪತ್ರೆಗೆ ದಾಖಲುಗೊಳಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗಣೇಶ್ ಮೃತಪಟ್ಟಿರುವುದಾಗಿ ಪತ್ನಿ ಅರುಣ ಅವರು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪ್ರಕರಣ ದಾಖಲಾಗಿದೆ.