ಮಡಿಕೇರಿ, ಡಿ. ೭: ಸದಾ ಕಾಲ ಜನರ ಸ್ಮರಣೆಯಲ್ಲಿರುವಂಥ ಜನಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸಿ ಎಂದು ಲಯನ್ಸ್ ಸಂಸ್ಥೆಯ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ ಕರೆ ನೀಡಿದ್ದಾರೆ.

ಮಡಿಕೇರಿ ಮತ್ತು ಸುಂಟಿಕೊಪ್ಪ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಬಳಿಕ ಮಡಿಕೇರಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ, ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಸಮಾಜ ಸೇವೆಗಾಗಿ ದೊರಕಿದ ಅವಕಾಶಗಳನ್ನು ಪ್ರತಿಯೋರ್ವ ಸದಸ್ಯರೂ ಸದುಪಯೋಗಪಡಿಸಿಕೊಳ್ಳಬೇಕು. ಜನರಿಗೆ ಉಪಯುಕ್ತವಾದ ಯೋಜನೆಗಳನ್ನು ವಿಳಂಬರಹಿತವಾಗಿ ಜಾರಿಗೊಳಿಸಿ ಜನರಿಗೆ ಉಪಕಾರ ಮಾಡಬೇಕೆಂದೂ ಅವರು ಹೇಳಿದರು. ಸಂತೋಷವನ್ನು ಹಂಚಿಕೊಳ್ಳಿ ಎಂಬ ಈ ವರ್ಷದ ಲಯನ್ಸ್ ಧ್ಯೇಯ ವಾಕ್ಯದಂತೆ ಜನರ ಸೇವೆ ಮೂಲಕ ದೊರಕುವ ಸಂತೋಷವನ್ನು ಪ್ರತಿಯೋರ್ವರೂ ಹಂಚಿಕೊಳ್ಳಬೇಕು. ಇಂತಹ ಸಂತೋಷ ಮತ್ತಷ್ಟು ಸಮಾಜಸೇವಾ ಕಾರ್ಯಗಳಿಗೆ ಮಾದರಿ ಆಗಬೇಕೆಂದೂ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ನಟರಾಜ ಕೆಸ್ತೂರ್, ಕಾರ್ಯದರ್ಶಿ ಪಿ.ಪಿ. ಸೋಮಣ್ಣ, ಜಂಟಿ ಕಾರ್ಯದರ್ಶಿ ಆರ್. ರಾಘವೇಂದ್ರ, ಖಜಾಂಚಿ ಕೆ.ಕೆ. ದಾಮೋದರ್, ಸುಂಟಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಶಾಶ್ವತ್ ಬೋಪಣ್ಣ, ಕಾರ್ಯದರ್ಶಿ ಸಿ.ವಿ. ನಿಕೇಶ್, ಖಜಾಂಚಿ ಎಸ್.ಎಸ್. ಶಶಾಂಕ್, ಪ್ರಾಂತಿಯ ಅಧ್ಯಕ್ಷ ಧನು ಉತ್ತಯ್ಯ, ಲಯನ್ಸ್ ಪ್ರಮುಖರಾದ ನವೀನ್ ಅಂಬೆಕಲ್, ಎಂ.ಎ. ನಿರಂಜನ್, ಮೋಹನ್ ದಾಸ್, ಮಧುಕರ್ ಕೆ., ಮಧುಕರ್ ಶೇಟ್, ಮೋಹನ್ ಕುಮಾರ್, ಮುರುಗೇಶ್ ಸೇರಿದಂತೆ ಲಯನ್ಸ್ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.