ಮಡಿಕೇರಿ, ಡಿ. ೫: ಜಿಲ್ಲೆಯ ಪ್ರತಿ ಪ್ರೌಢಶಾಲೆಯಲ್ಲಿ ೧೮ ವರ್ಷ ತುಂಬಿರುವ ವಿದ್ಯಾರ್ಥಿಗಳಿದ್ದಲ್ಲಿ ಹಾಗೂ ತಮ್ಮ ಶಾಲೆ ಮತ್ತು ಊರು ಮತ್ತು ಸುತ್ತಮುತ್ತಲಿನ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ೧೮ ವರ್ಷ ತುಂಬಿದ ವಿದ್ಯಾರ್ಥಿಗಳು ಮತ್ತು ಯುವ ಮತದಾರರು ಇದ್ದಲ್ಲಿ ಅವರ ಹೆಸರನ್ನು ಈಗಾಗಲೇ ಮತದಾರರ ನೋಂದಣಿ ಆ್ಯಪ್ ಮೂಲಕ (ಗಿoಣeಡಿ ಊeಟಠಿಟiಟಿe ಂಠಿಠಿ) ನೋಂದಾಯಿಸಿದ್ದರೆ, ತಕ್ಷಣದಲ್ಲಿ ಈ ಗ್ರೂಪ್ ಮೂಲಕ ಡಿಡಿಪಿಐ ಕಚೇರಿಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್ (ಮೊ: ೯೪೪೮೮೭೩೯೯೯) ಅವರಿಗೆ ತಮ್ಮ ಶಾಲೆಯ ಹೆಸರಿನೊಂದಿಗೆ ಮಾಹಿತಿ ನೀಡಲು ತಿಳಿಸಿದೆ.
ಈ ತನಕ ಯಾವುದೇ ನೋಂದಣಿಯಾಗದಿದ್ದಲ್ಲಿ ಶಾಲೆಯ ಮತದಾರರ ಸಾಕ್ಷರತಾ ಕ್ಲಬ್ (ಇಐಅ) ವತಿಯಿಂದ ಗಿoಣeಡಿ ಊeಟಠಿಟiಟಿe ಂಠಿಠಿ ಬಳಸಿಕೊಂಡು ತಾ. ೭ ರೊಳಗೆ ಹೊಸ ಮತದಾರರನ್ನು ನೋಂದಾವಣೆ ಮಾಡಿಸಿ ನೋಂದಾವಣೆಗೊAಡ ಮತದಾರರ ಮಾಹಿತಿಯನ್ನು ನೀಡಲು ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ ತಿಳಿಸಿದ್ದಾರೆ.