ಕುಶಾಲನಗರ, ಡಿ. ೫: ೨೦೨೦-೨೧ ಮಿಸ್ಟರ್ ಮತ್ತು ಮಿಸ್ ಸೌತ್ ಇಂಡಿಯ ಫ್ಯಾಷನ್ ಷೋ ಕುಶಾಲ ನಗರದ ಖಾಸಗಿ ರೆಸಾರ್ಟ್ ಒಂದರಲ್ಲಿ ರೈನ್ಜ್ ಈವೆಂಟ್ಸ್ ನೇತೃತ್ವದಲ್ಲಿ ನಡೆಯಿತು.

ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಿAದ ಒಟ್ಟು ೨೦ ಮಾಡೆಲ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯದ ವಿವಿಧ ಭಾಗದ ಮಾಡೆಲ್‌ಗಳು ಇಲ್ಲಿ ತಮ್ಮ ಜೋಡಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

೩ ಸುತ್ತಿನ ವಿವಿಧ ಹಂತದಲ್ಲಿ ಸ್ಪರ್ಧೆಯನ್ನು ತೀರ್ಪುಗಾರ ರಾಹುಲ್ ತಮ್ಮಣ್ಣ ಮತ್ತು ಯಶಸ್ವಿನಿ ನಡೆಸಿಕೊಟ್ಟರು. ರೇಟ್ರೋ ರೌಂಡ್, ಎತ್‌ನಿಕ್ ರೌಂಡ್ ಮತ್ತು ವೆಸ್‌ಟರ್ನ್ ರೌಂಡುಗಳನ್ನು ಆಯೋಜಿಸಲಾಗಿತ್ತು.

ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿ ವೈಭವಿ ಶ್ರೇಷ್ಠಿ, ಮಿಥುನ್, ರಾಹುಲ್ ಮತ್ತು ಜೇನಿಪರ್ ಡಿಸೋಜ ಪಾಲ್ಗೊಂಡಿದ್ದರು. ಫ್ಯಾಷನ್ ಷೋನಲ್ಲಿ ವಿವಿಧ ರೀತಿಯ ಬಿರುದುಗಳನ್ನು ನೀಡಲಾಯಿತು.

ಮಿಸ್ಟರ್ ಆಗಿ ಉತ್ತರ ಕರ್ನಾಟಕದ ಕಾರ್ತಿಕ್, ಮಿಸ್ ಉತ್ತರ ಕರ್ನಾಟಕ ಉಷಾ, ಮಿಸ್ಟರ್ ಕೂರ್ಗ್ ದವಾಲ್, ಮಿಸ್ ಕೂರ್ಗ್ ಹರ್ಷಿತ ಕೆ.ವಿ., ಮಿಸ್ಟರ್ ಮೈಸೂರ್ ಸುಹಾಸ್, ಮಿಸ್ ಮೈಸೂರ್ ಮಾನಸ, ಮಿಸ್ ಎಲಿಗೆಂಟ್ ಅಭಿಗ್ನ, ಮಿಸ್ ಕೊಡವತಿ ಹರ್ಷಿತಾ ಆಚಾರ್ಯ, ಮಿಸ್ಟರ್ ಕರ್ನಾಟಕ ಪ್ರದೀಪ್, ಮಿಸ್ ಕರ್ನಾಟಕ ನಿಹಾರಿಕ, ಮಿಸ್ಟರ್ ಬ್ಯಾಂಗಳೂರು ಅರುಣ್, ಮಿಸ್ ಬ್ಯಾಂಗಳೂರು ವನಿತಾ ಗೌಡ, ಮಿಸ್ ಗ್ಲ್ಯಾಮರ್ ಭುವನೇಶ್ವರಿ, ಮಿಸ್ಟರ್ ಹ್ಯಾಂಡಸA ವರುಣ್, ಮಿಸ್ ಗಾಡಿಜ್ಯಯಸ್ ರಾಧಿಕಾ, ಮಿಸ್ಟರ್ ಸೌತ್ ಇಂಡಿಯ ಸವಧತ್ತಿಯ ಪ್ರಸಾದ್, ಮಿಸ್ ಸೌತ್ ಇಂಡಿಯ ಜೇನಿಪರ್ ಡಿಸೋಜ ಆಯ್ಕೆಯಾದರು.

ಎಲ್ಲಾ ಸ್ಪರ್ಧಿಗಳಿಗೂ ಪ್ರಶಸ್ತಿ ಪತ್ರ, ಟ್ರೋಫಿಯೊಂದಿಗೆ ಗಿಡಗಳನ್ನು ನೀಡಿ ಗೌರವಿಸಲಾಯಿತು.