ಮಡಿಕೇರಿ, ಡಿ. ೬: ಚೆಟ್ಟಳ್ಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರನ್ನು ಕೋವಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ಭಾನುವಾರ ರಾತ್ರಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಯಾಲದಲ್ಲಿ ನಡೆದಿದೆ. ಅದೃಷ್ಟವಶಾತ್ ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಗೂ ಅವರ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಮೂವರ ವಿರುದ್ಧ ದೂರು ನೀಡಲಾಗಿದ್ದು, ಚೆಟ್ಟಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುತ್ತರೀರ ಪಪ್ಪು ತಿಮ್ಮಯ್ಯ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ೩೪೧, ೩೦೭, ೩೪ ಐಪಿಸಿ ಹಾಗೂ ೩೨೫ ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ. ಆರೋಪಿ ಪಪ್ಪು ತಿಮ್ಮಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭಾನುವಾರ ರಾತ್ರಿ ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಗೂ ಅವರ ಪತ್ನಿ ಮಡಿಕೇರಿಯಲ್ಲಿ ಸಂಬAಧಿಕರೊಬ್ಬರ ಮದುವೆ ಮುಗಿಸಿ ಬೈಕ್‌ನಲ್ಲಿ ಹಿಂತಿರುಗುವಾಗ ರಾತ್ರಿ ೯.೪೦ಕ್ಕೆ ಮಡಿಕೇರಿ-ಚೆಟ್ಟಳ್ಳಿ ರಸ್ತೆಯ ಅಬ್ಯಾಲದಲ್ಲಿ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರ ಮನೆಗೆ ತೆರಳುವ ರಸ್ತೆಯ ತಿರುವಿನಲ್ಲಿ ಬೈಕ್ ಅನ್ನು ಹಿಂಬದಿಯಿAದ ಅಡ್ಡಗಟ್ಟಿ ಕಾರಿನಲ್ಲಿದ್ದ ಮೂವರು ಹಾಗೂ ಪಪ್ಪು ತಿಮ್ಮಯ್ಯ ಅವರು ಕಾರಿನಿಂದ ಇಳಿಯುತ್ತಿದ್ದಾಗ ಪಪ್ಪು ತಿಮ್ಮಯ್ಯ ಅವರ ಕೈಯಲ್ಲಿದ್ದ ಕೋವಿಯನ್ನು ನೋಡಿದ ಕಂಠಿ ಕಾರ್ಯಪ್ಪ ಅವರು ತಕ್ಷಣ ತಮ್ಮ ಬೈಕ್ ಅನ್ನು ತಿರುಗಿಸಿ ವೇಗವಾಗಿ ಚೆಟ್ಟಳ್ಳಿ ಪಟ್ಟಣದ ಕಡೆಗೆ ಹೋಗಿದ್ದಾರೆ.
ನಂತರ ಕಂಠಿ ಕಾರ್ಯಪ್ಪ ಅವರು ಬೈಕ್ ಅನ್ನು ಪುನಃ ತಿರುಗಿಸಿ ಮನೆಯ ಕಡೆ ಹಿಂತಿರುಗುವಾಗ ಚೆಟ್ಟಳ್ಳಿ ಪಟ್ಟಣದ ೨೦೦ ಮೀಟರ್ ದೂರದಲ್ಲಿ ಪಪ್ಪು ತಿಮ್ಮಯ್ಯ ಅವರು ಎದುರು ಬದಿಯಿಂದ ಬಂದು ಕಾರನ್ನು ಅಡ್ಡ ನಿಲ್ಲಿಸಿ, ಕಾರಿನಿಂದ ಇಳಿದು ಹಳೆಯ ದ್ವೇಷದಿಂದ ಕೋವಿಯಿಂದ ಕಂಠಿ ಕಾರ್ಯಪ್ಪ ಕಡೆಗೆ ಗುರಿಮಾಡಿ ಗುಂಡು ಹಾರಿಸಿದ್ದಾರೆ. ಕಂಠಿ ಕಾರ್ಯಪ್ಪನವರು ಬೈಕ್ ಅನ್ನು ವೇಗವಾಗಿ ಓಡಿಸಿದ ಕಾರಣ ಗುಂಡು ಗಾಳಿಯಲ್ಲಿ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಪ್ಪು ತಿಮ್ಮಯ್ಯ ಹಾಗೂ ಇತರ ಮೂವರು ಹಳೆಯ ದ್ವೇಷದಿಂದ ತಮ್ಮನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಗೂ ಅವರ ಪತ್ನಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.