ಮಡಿಕೇರಿ, ಡಿ. ೬: ತಮ್ಮ ಪುತ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಮಾಜಿ ಸಚಿವರೊಬ್ಬರು ನಿಷೇಧಿತ ವನ್ಯಜೀವಿ ಸಂರಕ್ಷಣಾ ಅರಣ್ಯ ವಲಯದಲ್ಲಿ ನಿಯಮ ಬಾಹಿರವಾಗಿ ಮತಬೇಟೆಯಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಆರೋಪಿಸಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕಳೆದ ಶನಿವಾರ ಪಿರಿಯಾಪಟ್ಟಣದಿಂದ ಆನೆ ಚೌಕೂರು ಗೇಟ್ ಬಳಿಯ ನಿಷೇಧಿತ ವನ್ಯಜೀವಿ ಸಂರಕ್ಷಣಾ ಅರಣ್ಯ ವಲಯದ ಪಕ್ಕದಲ್ಲಿರುವ ಮುತ್ತುರಾಯ ದೇವಾಲಯಕ್ಕೆ ಗ್ರಾ.ಪಂ. ಸದಸ್ಯರನ್ನು ಕರೆಸಿ ಆಣೆ ಪ್ರಮಾಣ ಮಾಡಿಸಿ ಆಮಿಷ ಒಡ್ಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.