ಮಡಿಕೇರಿ, ಡಿ. ೫: ಅತ್ಯಂತ ಇಕ್ಕಟ್ಟಿನಿಂದ ಕೂಡಿದ್ದ ಮಡಿಕೇರಿ ನಗರದ ಕಾನ್ವೆಂಟ್ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ.
ಕೆಲವು ದಿನಗಳ ಹಿಂದೆ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಸ್ವಂತ ಹಣದಿಂದ ಕೈಗೊಂಡಿದ್ದೆ, ಆದರೆ ಆರ್ಥಿಕ ಹೊರೆಯಾದ ಕಾರಣ ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಇದನ್ನು ಗಮನಿಸಿದ ಮೂಡ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಜೆಸಿಬಿ ಯಂತ್ರ ನೀಡಿ ಸಹಕರಿಸಿದ್ದಾರೆ. ಆದ್ದರಿಂದ ಮತ್ತೆ ಕಾಮಗಾರಿ ಚುರುಕುಗೊಳಿಸಲಾಗಿದ್ದು, ವಿಜಯ ವಿನಾಯಕ ದೇವಾಲಯದಿಂದ ಕಾನ್ವೆಂಟ್ ಜಂಕ್ಷನ್‌ವರೆಗೆ ರಸ್ತೆ ವಿಸ್ತರಣೆ ಕಾರ್ಯ ನಡೆಯಲಿದೆ.
ವಿಸ್ತರಣೆಯಾದ ರಸ್ತೆ ಡಾಂಬರೀಕರಣವಾಗಲಿದೆ, ೧೭ನೇ ವಾರ್ಡ್ನ ವಿವಿಧೆಡೆ ರಸ್ತೆ ಅಭಿವೃದ್ಧಿ, ತಡೆಗೋಡೆ, ಚರಂಡಿ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸುಮಾರು ೩ ಕೋಟಿ ರೂ.ಗಳ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನಗರಸಭಾ ಸದಸ್ಯ ಅರುಣ್ ಶೆಟ್ಟಿ ತಿಳಿಸಿದ್ದಾರೆ.