ಗೋಣಿಕೊಪ್ಪ ವರದಿ, ಡಿ. ೫, ಕಾವೇರಿ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ತುಳುವೆರ ಜನಪದ ಕೂಟದ ಸಭೆಯಲ್ಲಿ ತುಳುವೆರ ಜನಪದ ಕೂಟದ ಪೊನ್ನಂಪೇಟೆ ತಾಲೂಕು ಸಮಿತಿ ಅಸ್ತಿತ್ವಕ್ಕೆ ತರಲಾಗಿದ್ದು, ಅಧ್ಯಕ್ಷರಾಗಿ ಕೆ.ಜಿ. ರಾಮಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು. ಇದರೊಂದಿಗೆ ಸಂಘಟನೆಗೆ ಒತ್ತು ನೀಡಲು ಸಲಹೆಗಾರರನ್ನು ಆಯ್ಕೆ ಮಾಡಲಾಯಿತು.

ಆಡಳಿತ ಮಂಡಳಿ: ಅಧ್ಯಕ್ಷರಾಗಿ ಕೆ.ಜಿ. ರಾಮಕೃಷ್ಣ, ಪ್ರ. ಕಾರ್ಯದರ್ಶಿಯಾಗಿ ಪಿ.ಆರ್. ವಿಜಯ, ಉಪಾಧ್ಯಕ್ಷರಾಗಿ ಪಿ.ಎಸ್. ಮಂಜುನಾಥ, ಸಂಧ್ಯಾ ಗಣೇಶ್‌ರೈ, ಪುರುಷೋತ್ತಮ, ಕಾರ್ಯದರ್ಶಿಯಾಗಿ ಪವಿತ್ರ ಸುಂದರ್, ಸಂಚಾಲಕರಾಗಿ ಸುರೇಶ್‌ರೈ. ನಿರ್ದೇಶಕರಾಗಿ ಬಿ. ಎಂ. ರಾಧಾಕೃಷ್ಣ, ದಿನೇಶ್, ಪುಷ್ಪ, ಮಣಿಪೂಜಾರಿ, ಗೀತಾ, ಮಮತಾ ದಿನೇಶ್, ಸಲಹೆಗಾರರಾಗಿ ಚಂದ್ರಶೇಖರ, ಬಿ.ಕೆ. ಮುಕುಂದ, ಜಯಕರ್, ಸುಮಿತ್ರ, ಬಾಲಕೃಷ್ಣರೈ, ವಿಷ್ಣುಮೂರ್ತಿ, ಪ್ರಕಾಶ್, ಯಮುನಾ, ಕವಿತಾ ದಿನೇಶ್, ರಶ್ಮಿ, ಬಿ.ಎಸ್. ಸುದರ್ಶನ್, ಡಾ. ಚಂದ್ರಶೇಖರ್, ಬಿ. ಎಸ್. ಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಬಿ.ಬಿ. ಐತಪ್ಪರೈ ಉದ್ಘಾಟಿಸಿ ಮಾತನಾಡಿ, ಜಿಲ್ಲಾದÀ್ಯಂತ ಸಂಘಟನೆಗೆ ಒತ್ತು ನೀಡಲಾಗಿದೆ. ಮಹಿಳೆಯರಿಗೂ ಸ್ಥಾನಮಾನ ನೀಡುವ ಮೂಲಕ ಸಂಘಟನೆ ಬಲಗೊಳ್ಳುತ್ತಿದೆ. ಸಂಘಟನೆ ಬಲಗೊಳ್ಳಲು ಇದರಿಂದ ಸಹಕಾರಿಯಾಗುತ್ತಿದೆ ಎಂದರು.

ಉಪಾಧ್ಯಕ್ಷ ಆನಂದ ರಘು ಮಾತನಾಡಿ, ಸಂಘಟನೆ ದೃಷ್ಠಿಯಿಂದ ತಾಲೂಕು ಘಟಕ ರಚನೆ ಅನಿವಾರ್ಯವಾಗಿದೆ. ರಾಜಕೀಯವಾಗಿ, ಶೈಕ್ಷಣಿಕವಾಗಿ ನಾವು ಸವಲತ್ತು ಪಡೆಯಲು ಒಗ್ಗಟ್ಟು ಅವಶ್ಯ. ಮಹಿಳೆ ಸಂಘಟನೆ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಕಾರ್ಯ ನಡೆಯುತ್ತಿದೆ ಎಂದರು.

ಹಿರಿಯರಾದ ಡಾ. ಚಂದ್ರಶೇಖರ್ ಮಾತನಾಡಿದರು. ಹಿರಿಯರಾದ ಗುರುಬಲ್ಲಾಳ್, ಕೂಟದ ಸ್ಥಾಪಕ ಅಧ್ಯಕ್ಷ ಶೇಖರ್ ಭಂಡಾರ್, ಗೌರವ ಅಧ್ಯಕ್ಷ ಬಾಲಕೃಷ್ಣರೈ, ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ಇದ್ದರು.